Water level | ಲಿಂಗನಮಕ್ಕಿಯಲ್ಲಿ ಒಂದೇ ದಿನ ಮೂರಡಿ ನೀರು ಏರಿಕೆ, ಯಾವ ಜಲಾಶಯದಲ್ಲಿ ಎಷ್ಟಿದೆ ನೀರು?

Linganamakki dam

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ‌ ಮುಂದುವರಿದಿದ್ದು,‌ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಒಂದೇ‌ ದಿನ 3.70 ಅಡಿ ನೀರು ಏರಿಕೆಯಾಗಿದೆ. ಅಣೆಕಟ್ಟಿನ ಗರಿಷ್ಠ ಮಟ್ಟ 1819 ಅಡಿ ಇದ್ದು, 1791.50 ಅಡಿ ನೀರಿದೆ. ಒಳಹರಿವು 87496 ಕ್ಯೂಸೆಕ್ಸ್ ಇದೆ.‌ ಭದ್ರಾ ಜಲಾಶಯದ ಗರಷ್ಠ ಮಟ್ಟ 186 ಅಡಿ ಇದ್ದು, ಪ್ರಸ್ತುತ 157.11 ಅಡಿ ನೀರಿದೆ. 49,555 ಕ್ಯೂಸೆಕ್ಸ್ ಒಳಹರಿವಿದೆ. ತುಂಗಾ ಜಲಾಶಯದಲ್ಲಿ ನೀರು ಈಗಾಗಲೇ ಗರಿಷ್ಠ ಮಟ್ಟ (588.24 ಅಡಿ) ತಲುಪಿದ್ದು, 68,895 ಕ್ಯೂಸೆಕ್ಸ್ ಒಳಹರಿವಿದ್ದು, 64.312 ಕ್ಯೂ. ಹೊರಹರಿವಿದೆ. ಮಾಣಿ ಜಲಾಶಯದಲ್ಲಿ 580.94 ಮೀಟರ್ (ಒಳಹರಿವು 6559 ಕ್ಯೂಸೆಕ್ಸ್) ನೀರಿದೆ.

READ | ಶಿವಮೊಗ್ಗದಲ್ಲಿ ಮಳೆ ಅನಾಹುತ, ಎಲ್ಲಿ ಎಷ್ಟು ಮನೆಗಳಿಗೆ ಹಾನಿ? ಡ್ಯಾಂಗಳಲ್ಲಿ ನೀರಿನ ಮಟ್ಟವೆಷ್ಟಿದೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ

error: Content is protected !!