ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಭಾನುವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ವಿವಿಧ ಠಾಣೆಯ 10 ಜನ ಪಿಎಸ್ಐ ಮತ್ತು 50 ಜನ ಪೊಲೀಸ್ ಸಿಬ್ಬಂದಿ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಮಹಿಳಾ ಬ್ಯಾರಾಕ್ ಗಳನ್ನು ಸೇರಿದಂತೆ ಕೇಂದ್ರ ಕಾರಾಗೃಹವನ್ನು ಪರಿಶೀಲನೆ ನಡೆಸಿದರು.
ಕೇಂದ್ರ ಕಾರಾಗೃಹದಲ್ಲಿ ಗಾಂಜಾ ಸೇರಿ ಇನ್ನಿತರ ವಸ್ತುಗಳ ಬಳಕೆ ಬಗ್ಗೆ ಆರೋಪಗಳು ನಿರಂತರವಾಗಿ ಕೇಳಿಬರುತ್ತಿರುವುದರಿಂದ ಪೊಲೀಸರು ದಾಳಿ ನಡೆಸುತ್ತಲೇ ಇರುತ್ತಾರೆ. ಅದೇ ರೀತಿ ಈಬಾರಿಯೂ ದಾಳಿ ಮಾಡಲಾಗಿದೆ. ಆದರೆ, ಏನೂ ಲಭಿಸಿಲ್ಲ ಎಂದು ತಿಳಿದುಬಂದಿದೆ.
READ | ಛತ್ರಿ ಹಿಡಿದುಕೊಂಡು ಬೈಕ್ ರೈಡ್ ಮಾಡುವವರಿಗೆ ಪೊಲೀಸರ ಕ್ಲಾಸ್!