Dengue fever | ಡೆಂಗ್ಯೂ ತಡೆಗೆ ಡಾ.ಧನಂಜಯ ಸರ್ಜಿ ನೀಡಿದ ಸಲಹೆಗಳೇನು? ಸರ್ಕಾರದ ವಿರುದ್ಧ ಗಂಭೀರ ಆರೋಪ

Dhananjay sarji session pic

 

 

ಸುದ್ದಿ ಕಣಜ.ಕಾಂ ಬೆಂಗಳೂರು
BANGALURU (VIDHAN SAUDHA): ರಾಜ್ಯದಲ್ಲಿ ಡೆಂಗ್ಯೂ ರೋಗ ವ್ಯಾಪಕವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಣ ಮಾಡಲು ಸರ್ಕಾರ ಮಸ್ಕಿಟೋ ರೆಪಲೆಂಟ್ (mosquito repellent)ಗಳನ್ನು ವಿತರಿಸಬೇಕು ಎಂದು ವಿಧಾನ ಪರಿಷತ್ ಅದಸ್ಯ ಡಾ.ಧನಂಜಯ ಸರ್ಜಿ (Dr. Dhananjay sarji) ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲಹೆ ನೀಡಿದರು.

READ | ಟಾಸ್ಕ್ ಫೋರ್ಸ್ ರಚಿಸಿ ವಿಶೇಷ ಪ್ಯಾಕೇಜ್ ನೀಡಲು ಡಾ.ಧನಂಜಯ ಸರ್ಜಿ

ಮಂಗಳವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ರಾಜ್ಯದಾದ್ಯಂತ ಡೆಂಗ್ಯೂ ಪ್ರಕರಣಗಳು ಹಾಗೂ ಸಾವುಗಳು ಹೆಚ್ಚಾಗುತ್ತಿದೆ. ಆದರೆ, ಆರೋಗ್ಯ ಇಲಾಖೆ ನೀಡುತ್ತಿರುವ ವರದಿಗಳಲ್ಲಿ ತಪ್ಪಾಗಿ ಅಂಕಿ-ಅಂಶಗಳನ್ನು ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ರೋಗದ ನಿಯಂತ್ರಣಕ್ಕೆ ಎಷ್ಟು ಮಸ್ಕಿಟೋ ರೆಪಲೆಂಟ್ ಗಳನ್ನೂ ಖರೀದಿ ಮಾಡಲಾಗಿದೆ. ಎಷ್ಟನ್ನು ಡೆಂಗ್ಯೂ ರೋಗಿಗಳಿಗೆ ವಿತರಿಸಲಾಗಿದೆ ಎಂದು ಪ್ರಶ್ನಿಸಿದರು.
ಡೆಂಗ್ಯೂ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಬಹಳ ಮುಖ್ಯವಾಗಿ ಡೀಟ್ ಅಂಶ ಇರುವ ರೆಪಲೆಂಟ್ ಗಳನ್ನು ಡೆಂಗ್ಯು ರೋಗಿಗಳು ಹಚ್ಚಬೇಕು. ಇದರಿಂದ ಅವರಿಗೆ ಸೊಳ್ಳೆ ಕಚ್ಚುವುದನ್ನು ತಡೆಯಬಹುದು ಹಾಗೂ ಸೊಳ್ಳೆಗಳಿಗೆ ಇನ್ಫೆಕ್ಷನ್ ಆಗಿ ಅದು ಬೇರೆ ಅವರಿಗೆ ಹರಡುವುದನ್ನು ತಡೆಯಬಹುದು ಎಂದು ಹೇಳಿದರು.
ಸೊಳ್ಳೆಯಲ್ಲಿ ಹತ್ತು ದಿನ ಸೋಂಕು

mosquitos
ಈ ವೇಳೆ ಡೆಂಗ್ಯು ಬಂದಂತಹ ವ್ಯಕ್ತಿಗೆ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆ ಕಚ್ಚುತ್ತದೆಯೋ ಆ ಸೊಳ್ಳೆಗೂ ಸೋಂಕು ತಗುಲುತ್ತದೆ. ಆ ಸೊಳ್ಳೆಯು 10 ದಿನಗಳವರೆಗೂ ಯಾವ ಯಾವ ವ್ಯಕ್ತಿಗೆ ಕಚ್ಚುತ್ತದೆಯೋ ಎಲ್ಲರಿಗೂ ಸೋಂಕು ಹರಡುತ್ತದೆ ಎಂದು ವಿಷಯ ಪ್ರಸ್ತಾಪಿಸಿದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಹೌದಾ ಎಂದು ಉದ್ಗರಿಸಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಆಗ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ಡಾ.ಸರ್ಜಿ ಅವರು ಹೇಳಿರುವುದು ಸರಿ ಇದೆ ಎಂದು ಧ್ವನಿಗೂಡಿಸಿದರು.
ವೈಯಕ್ತಿಕ ರಕ್ಷಣೆ ಒದಗಿಸಿ
ಮುಂದುವರಿದು ಡೆಂಗ್ಯೂ ಪೀಡಿತ ವ್ಯಕ್ತಿಗೆ ಮೊದಲು ವೈಯಕ್ತಿಕ ರಕ್ಷಣೆಯನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಸೊಳ್ಳೆ ಪರದೆ ಅಥವಾ ಮಸ್ಕಿಟೋ ರೆಪಲೆಂಟ್ ಅನ್ನು ಬೆಳಗ್ಗೆ ಮತ್ತು ಸಂಜೆ ಹಚ್ಚಿಕೊಳ್ಳಬೇಕು. ಮಸ್ಕಿಟೋ ರೆಪಲೆಂಟ್ ಹಚ್ಚಿಕೊಳ್ಳುವುದರಿಂದ ಡೆಂಗ್ಯೂ ಪೀಡಿತ ವ್ಯಕ್ತಿಗೆ ಸೊಳ್ಳೆಗಳು ಕಚ್ಚುವುದಿಲ್ಲ. ಆಗ ಸೋಂಕು ಹರಡುವುದು ಕಡಿಮೆಯಾಗುತ್ತದೆ. ಹಾಗಾಗಿ ಡೆಂಗ್ಯು ಬಂದಂತಹ ವ್ಯಕ್ತಿಗಳಿಗೆ 10 ರಿಂದ 14 ದಿನಗಳವರೆಗೂ ಕಡ್ಡಾಯವಾಗಿ ಮಸ್ಕಿಟೋ ರೆಪಲೆಂಟ್ ಹಚ್ಚಿಕೊಳ್ಳುವಂತೆ ಸಲಹೆ ನೀಡಿದರು. ಈ ವೇಳೆ ಸಚಿವ ದಿನೇಶ್ ಗುಂಡುರಾವ್ ಡಾ.ಸರ್ಜಿ ಅವರ ಸಲಹೆ ಸೂಕ್ತವಾಗಿದೆ ಇದನ್ನ ಪರಿಗಣಿಸಿ ಮುಂಜಾಗ್ರತಾ ಕ್ರಮಗಳನ್ನು ಕೈ ಕೊಳ್ಳಲಾಗುವುದು ಎಂದು ಹೇಳಿದರು.

error: Content is protected !!