ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುಂಸಿ ವಿದ್ಯುತ್ ವಿತರಣೆ ಕೇಂದ್ರ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಪ್ರಗತಿಯಲ್ಲಿರುವುದರಿಂದ ಜನವರಿ 30 ಮತ್ತು 31ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಫ್ 2, 3 ಮತ್ತು 9 ಮಾರ್ಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ ಕರೆಂಟ್ ಕಟ್ | ಕುಂಸಿ, ಹುಬ್ಬನಹಳ್ಳಿ, ಹಾರ್ನಳ್ಳಿ, ಜಾಮೇನಹಳ್ಳಿ, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.