ಡಿವೈಎಸ್‍ಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದಾದ್ಯಂತ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶಿವಮೊಗ್ಗ ಉಪ ವಿಭಾಗದ ಡಿವೈಎಸ್‍ಪಿ ಉಮೇಶ್ ನಾಯ್ಕ ಅವರನ್ನು ಶಿವಮೊಗ್ಗದ ಡಿಸಿಆರ್‍ಬಿಗೆ ವರ್ಗಾವಣೆ ಮಾಡಲಾಗಿದೆ. ಈ ಸ್ಥಾನಕ್ಕೆ ಚನ್ನಗಿರಿ ಉಪ ವಿಭಾಗದಲ್ಲಿ ಪ್ರಬೇಷನರಿ ಡಿವೈಎಸ್‍ಪಿ ಆಗಿ ಕಾರ್ಯನಿರ್ವಹಿಸಿರುವ ಪ್ರಶಾಂತ್ ಜಿ.ಮುನ್ನೋಳಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ । ಉಂಬ್ಳೇಬೈಲಲ್ಲಿ ಮತ್ತೆ ಶುರುವಾಯ್ತು ಒಂಟಿ ಸಲಗದ ಕಾಟ, ಜನರಲ್ಲಿ ಹೆಚ್ಚಿದ ಆತಂಕ

ಪೊಲೀಸ್ ಇನ್ಸ್ ಪೆಕ್ಟರ್ | ಕೆ.ವಿ.ಕೃಷ್ಣಪ್ಪ ಅವರನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆರ್.ವಸಂತ್ ಕುಮಾರ್ ಅವರನ್ನು ದೊಡ್ಡಪೇಟೆ ವೃತ್ತದಿಂದ ದೊಡ್ಡಪೇಟೆ ಪೊಲೀಸ್ ಠಾಣೆ (ಮೇಲ್ದರ್ಜೆಗೇರಿಸಲಾದ ಹುದ್ದೆ), ಎಂ.ಸುನೀಲ್ ಕುಮಾರ್ ಅವರನ್ನು ಸಾಗರ ಗ್ರಾಮಾಂತರ ವೃತ್ತದಿಂದ ಬೆಂಗಳೂರಿನ ಕೇಂದ್ರ ವಲಯ ಐಜಿಪಿ ಕಚೇರಿಗೆ ವರ್ಗಾಯಿಸಲಾಗಿದೆ.

error: Content is protected !!