ಗಾಂಜಾ ಪರೇಡ್ | ಶಿವಮೊಗ್ಗದಲ್ಲಿ ಗಾಂಜಾ ಮಾರಾಟಗಾರರಿಗೆ ಎಸ್.ಪಿ. ಖಡಕ್ ವಾರ್ನಿಂಗ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಂಜಾ ಪ್ರಕರಣದಲ್ಲಿ ಭಾಗಿಯಾದ ಶಿವಮೊಗ್ಗ ಉಪ ವಿಭಾಗ ವ್ಯಾಪ್ತಿಯ ಆರೋಪಿಗಳನ್ನು ಕರೆದು ಗುರುವಾರ ಪರೇಡ್ ಮಾಡಲಾಯಿತು.

ನಗರದ ಡಿ.ಎ.ಆರ್ ಮೈದಾನದಲ್ಲಿ ಆಯೋಜಿಸಿದ್ದ ಗಾಂಜಾ ಪರೇಡ್ ನಲ್ಲಿ 89 ಜನ ಆರೋಪಿಗಳು ಭಾಗವಹಿಸಿದ್ದರು. ಅವರಿಗೆ ಮುಂದೆ ಇಂತಹ ಕೃತ್ಯಗಳಲ್ಲಿ ಭಾಗವಹಿಸದಂತೆ ಎಸ್.ಪಿ. ಕೆ.ಎಂ.ಶಾಂತರಾಜು ಅವರು ಖಡಕ್ ವಾರ್ನಿಂಗ್ ನೀಡಿದರು.
ಒಂದುವೇಳೆ, ಗಾಂಜಾ ಪ್ರಕರಣದಲ್ಲಿ ಭಾಗಿಯಾದ ವಿಚಾರ ಗೊತ್ತಾದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಎಸ್.ಪಿ. ಎಚ್.ಟಿ.ಶೇಖರ್, ಉಮೇಶ್ ನಾಯ್ಕ ಉಪಸ್ಥಿತರಿದ್ದರು.

error: Content is protected !!