ಪೊಲೀಸ್ ಲಾಕ್‍ಅಪ್ ಸೇರಿದ ಕೋಳಿ!

 

 

ಸುದ್ದಿ ಕಣಜ.ಕಾಂ
ಹೊಸನಗರ: ಅಕ್ರಮ ಕೋಳಿ ಜೂಜಾಟ ಆಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರು ಜೂಜಿಗಿಟ್ಟಿದ್ದ ಕೋಳಿಯನ್ನೂ ವಶಕ್ಕೆ ಪಡೆದಿದ್ದಾರೆ!

ಇದನ್ನೂ ಓದಿ । ಪಬ್ಲಿಕ್ ಪ್ಲೇಸ್ ನಲ್ಲಿ ಗಾಂಜಾ ಮಾರಾಟ, ಇಬ್ಬರು ಅರೆಸ್ಟ್, ಹೇಗೆ ನಡೀತು ಕಾರ್ಯಾಚರಣೆ?

ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶುಂಠಿಕೊಪ್ಪ ಗ್ರಾಮದಲ್ಲಿ ಕೋಳಿ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ವಿಶೇಷ ತಂಡ ದಾಳಿ ನಡೆಸಿದೆ.
ವಶಕ್ಕೆ ಪಡೆದಿರುವುದು | ಇಬ್ಬರನ್ನು ಬಂಧಿಸಿದ್ದು, ಉಳಿದ ಆರೋಪಿತರು ತಲೆ ಮರೆಸಿಕೊಂಡಿದ್ದಾರೆ. ಬಂಧಿತರಿಂದ ಕೋಳಿ ಜೂಜಾಟಕ್ಕೆ ಪಣವಾಗಿಟ್ಟಿದ್ದ 2,500 ರೂ ನಗದು, 5 ದ್ವಿ ಚಕ್ರ ವಾಹನ ಹಾಗೂ ಜೂಜಾಟಕ್ಕೆ ಬಳಸಿದ 1 ಕೋಳಿಯನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ | ರಿಪ್ಪನ್ ಪೇಟೆ ಪೊಲೀಸ್ ಠಾಣೆ ಪಿಎಸ್.ಐ ರಾಜೇಂದ್ರ ನಾಯಕ್ ಮತ್ತು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿದೆ.

error: Content is protected !!