ಬಿ.ಪಿ.ಎಲ್ ಕಾರ್ಡ್ ಮಾನದಂಡ ಪರಿಷ್ಕರಣೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ಬಿ.ಪಿ.ಎಲ್ ಕಾರ್ಡ್ ಮಾನದಂಡ ಪರಿಷ್ಕರಣೆ ಕುರಿತು ಆಹಾರ ಸಚಿವರು ನೀಡಿರುವ ಹೇಳಿಕೆಗೆ  ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರೋಧಿಸಿದ್ದಾರೆ.

ಸೋಮವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜನವಿರೋಧಿ ನಿರ್ಧಾರ ಆರೋಪಿಸಿದ್ದಾರೆ.

5 ಎಕರೆ ಜಮೀನು, ಮನೆಯಲ್ಲಿ ಟಿವಿ, ಫ್ರಿಡ್ಜ್ ಇದ್ದವರು ಬಿಪಿಎಲ್ ಕಾರ್ಡ್ ವಾಪಸ್ ಕೊಡುವಂತೆ ಹೇಳಿರುವುದು ಜನವಿರೋಧಿ ನೀತಿ ಎಂದು ತಿಳಿಸಿದ್ದಾರೆ.

5 ಎಕರೆ ಜಮೀನು ಹೊಂದಿರುವ ಅನ್ನದಾತನ ಸ್ಥಿತಿ ಆಹಾರ ಸಚಿವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಟೋಪಿ ಹಾಕಿದವರಿಂದ ಬೇರೆನು ನಿರೀಕ್ಷಿಸಲು ಸಾಧ್ಯ?: ಕಬ್ಬು ಬೆಳೆಗಾರರಿಗೆ ಬಾಕಿ ಹಣ ನೀಡದೇ ಟೋಪಿ ಹಾಕಿರುವ ಸಚಿವರಿಂದ ಬೇರೆಯದ್ದೇನು ನಿರೀಕ್ಷಿಸಲು ಸಾಧ್ಯ ಎಂದು ಟಾಂಗ್ ನೀಡಿದರು.

ಪಡಿತರ ಕಾರ್ಡ್ ವಾಪಸ್ ಪಡೆಯುವ ನಿರ್ಣಯ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಭೋಜೇಗೌಡ, ಎಂ. ಶ್ರೀಕಾಂತ್, ನಾಗರಾಜ್ ಕಂಕಾರಿ ಉಪಸ್ಥಿತರಿದ್ದರು.

error: Content is protected !!