ಖೇಲೊ ಇಂಡಿಯಾ ವಿಂಟರ್ ಗೇಮ್ಸ್ | ಶಿವಮೊಗ್ಗದ ಇಬ್ಬರಿಗೆ ಚಿನ್ನದ ಪದಕ, ರಾಷ್ಟ್ರಮಟ್ಟದಲ್ಲಿ ಮಲೆನಾಡಿನ ಕೀರ್ತಿ ಎತ್ತಿಹಿಡಿದ ಪ್ರತಿಭೆಗಳು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ ಗುಲ್ ಮಾರ್ಗ್‍ನಲ್ಲಿ ನಡೆಯುತ್ತಿರುವ ಎರಡನೇ `ಖೇಲೊ ಇಂಡಿಯಾ ವಿಂಟರ್ ಗೇಮ್ಸ್’ನಲ್ಲಿ ಶಿವಮೊಗ್ಗ ತಾಲೂಕಿನ ಆಡಿನ ಕೊಟ್ಟಿಗೆ ಗ್ರಾಮದ ಇಬ್ಬರು ಬಾಲಕಿಯರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

VIDEO REPORT

19 ವಯೋಮಾನದೊಳಗಿನ ವಿಭಾಗದಲ್ಲಿ ಸ್ನೋ ಶೂಸ್ ರನ್ನಿಂಗ್ 5 ಕಿ.ಮೀ. ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಮಲೆನಾಡಿನ ಕೀರ್ತಿ ಪತಾಕೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.
ಯಾರಿವರು | ಶಿವಮೊಗ್ಗ ತಾಲೂಕಿನ ಆಡಿನ ಕೊಟ್ಟಿಗೆ ಗ್ರಾಮದ ಧನಲಕ್ಷ್ಮಿ ಮತ್ತು ಲತಾ ಅವರು ಭಾಗವಹಿಸಿ ಗೆಲುವು ಸಾಧಿಸಿದ್ದಾರೆ. ಭಾರಿ ಹಿಮಪಾತದ ಮಧ್ಯೆಯೂ ಮಲೆನಾಡಿನ ಈ ಪ್ರತಿಭೆಗಳನ್ನು ಸಾಧನೆ ಮಾಡಿದ್ದು, ಭಾರಿ ಪ್ರಸಂಶೆ ವ್ಯಕ್ತವಾಗುತ್ತಿದೆ.
ಎಸ್.ಸಿಪಿ ಟಿಎಸ್.ಪಿ ಅಡಿ ಆಯ್ಕೆ | ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ಪ್ರತಿನಿಧಿಸಿದ ಬಾಲಕಿಯರು ಎಸ್.ಸಿ.ಪಿ ಟಿ.ಎಸ್.ಪಿ ಅಡಿ ಆಯ್ಕೆಯಾಗಿ ತರಬೇತಿ ಪಡೆದಿದ್ದರು. ಇವರನ್ನು ಗೆಥ್ನಾ (GETHNAA) ಮತ್ತು ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ ದಕ್ಷಿಣ ವಲಯದಿಂದ ತರಬೇತಿ ನೀಡಲಾಗಿತ್ತು.
ಖೇಲೊ ಇಂಡಿಯಾದಲ್ಲಿ ಚಿನ್ನಕ್ಕೆ ಮುತ್ತಿಡುವ ಮೂಲಕ ಮಲೆನಾಡು ಮಾತ್ರವಲ್ಲದೇ ರಾಜ್ಯಕ್ಕೂ ಇವರು ಹೆಮ್ಮೆ ತಂದಿದ್ದಾರೆ.

error: Content is protected !!