ವರದಕ್ಷಿಣೆ ಕಿರುಕುಳ ನೀಡಿದವರಿಗೆ ಶಿಕ್ಷೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ವರದಕ್ಷಿಣೆ ಕಿರುಕುಳ ನೀಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಕುಸ್ಕೂರು ಗ್ರಾಮದ ನಿವಾಸಿಗಳಾದ ವೆಂಕಟೇಶ್ ನಾಯ್ಕ್ ಮತ್ತು ಚಿನ್ನಯ್ಯ ನಾಯ್ಕ್ ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ । ತಾಯ್ನಾಡಿಗೆ ಮರಳಲಿದ್ದಾರೆ ದಾವಣಗೆರೆ ಮೂಲದ ‘ಕೇರಳಾ ಸಿಂಗಂ’

ವರದಕ್ಷಿಣೆಗಾಗಿ ತನ್ನ ಪತ್ನಿ ಶಾರದಾ ಅಲಿಯಾಸ್ ಸೀತಾಬಾಯಿ ಅವರಿಗೆ ವೆಂಕಟೇಶ್ ನಾಯ್ಕ್ ಪೀಡಿಸುತ್ತಿದ್ದ. ಈ ಸಂಬಂಧ ವಿಚಾರಣೆ ನಡೆಸಿದ ಶಿವಮೊಗ್ಗದ ಎರಡನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಅಂಬಣ್ಣ ಅವರು ತೀರ್ಪು ಪ್ರಕಟಿಸಿದ್ದಾರೆ.

ಶಿಕ್ಷೆ ಎಷ್ಟು ಗೊತ್ತಾ | ಆರೋಪಿಗಳಿಗೆ ಕಲಂ 498(ಎ)ಐಪಿಸಿ ಅಪರಾಧಕ್ಕೆ ತಲಾ ಒಂದು ವರ್ಷ ಸಾದಾ ಸಜೆ ಶಿಕ್ಷೆ ಹಾಗೂ ತಲಾ 1 ಸಾವಿರ ರೂಪಾಯಿ ದಂಡ ಹಾಗೂ ಕಲಂ 354 ಐಪಿಸಿ ಅಪರಾಧಕ್ಕೆ ತಲಾ ಒಂದು ವರ್ಷದ ಸಾದಾ ಸಜೆ ಶಿಕ್ಷೆ, ಕಲಂ 324 ಐಪಿಸಿ ಅಪರಾಧಕ್ಕೆ ತಲಾ ಆರು ತಿಂಗಳು ಸಾದಾ ಸಜೆ ಶಿಕ್ಷೆ ಹಾಗೂ ತಲಾ 500 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಜತೆಗೆ, ನೊಂದ ಮಹಿಳೆ ಶಾರದಾ ಅವರಿಗೆ 10,000 ಹಣವನ್ನು ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ. ಕಿರಣ್ ಕುಮಾರ್ ವಾದ ಮಂಡಿಸಿದ್ದರು.

error: Content is protected !!