ಕ್ವಿಂಟಾಲ್‍ಗೂ ಅಧಿಕ ಅಡಕೆ ಕಳವು ಮಾಡಿದ ಆರೋಪಿ ಅರೆಸ್ಟ್, ಈತನ ವಿರುದ್ಧ ದಾಖಲಾದ ಕೇಸ್‍ಗಳಷ್ಟು?

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಹಲವೆಡೆ ಅಡಕೆ ಕಳವು ಮಾಡಿದ ಆರೋಪಿಯೊಬ್ಬನನ್ನು ಆಗುಂಬೆ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.

ಇದನ್ನೂ ಓದಿ | ಅಡಕೆ, ಬಾಳೆ ಸುಟ್ಟು ಭಸ್ಮ, ಭಾರಿ ನಷ್ಟ

ಕಮ್ಮರಡಿ ಸಮೀಪದ ಮಣಿಕಂಠ(19) ಬಂಧಿತ ಆರೋಪಿ. ಈತನ ವಿರುದ್ಧ ಆಗುಂಬೆ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಚಿಪ್ಪಳಕಟ್ಟೆ ಗ್ರಾಮದಲ್ಲಿ ಅಂದಾಜು 1 ಕ್ವಿಂಟಾಲ್ ಗೂ ಅಧಿಕ ಅಡಕೆ ಕಳವು ಮಾಡಿದ್ದಕ್ಕೆ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಕಾರ್ಯಾಚರಣೆ ಮಾಡಿದ ತಂಡ | ಡಿವೈಎಸ್.ಪಿ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಪ್ರವೀಣ್ ನೀಲಮ್ಮನವರ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.

error: Content is protected !!