ಗಲಾಟೆ, ಗದ್ದಲದ ನಡುವೆಯೇ ಪಾಲಿಕೆ 2.81 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ಮಹಾನಗರ ಪಾಲಿಕೆ ಸಭಾಂಗಣದಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು 2021-22ನೇ ಸಾಲಿನ ಬಜೆಟ್ ಮಂಡಿಸಿದರು.

ಇದನ್ನೂ ಓದಿ | ಮಾಸ್ಕ್ ಧರಿಸದವರಿಗೆ ದಂಡ, ಒಂದೇ ತಿಂಗಳಲ್ಲಿ 2.23 ಲಕ್ಷ ರೂ. ಫೈನ್, ಯಾವ ತಾಲೂಕಿನಲ್ಲಿ ಎಷ್ಟು ದಂಡ?

ಬುಧವಾರ ನಡೆದ ಸಭೆಯಲ್ಲಿ ಬಜೆಟ್ ಸಭೆ ಆರಂಭಕ್ಕೂ ಮುನ್ನವೇ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಅವರು ಇದೊಂದು ಅವೈಜ್ಞಾನಿಕ ಬಜೆಟ್, ವಾಸ್ತವಕ್ಕೆ ಹತ್ತರವಲ್ಲದ ಅಂಕಿ ಅಂಶಗಳಿವೆ ಎಂದು ಆಪಾದಿಸಿದರು. ತಕ್ಷಣ ಅವರ ದನಿಗೆ ಸಾಥ್ ನೀಡಿದ ವಿರೋಧ ಪಕ್ಷದ ಪಾಲಿಕೆ ಸದಸ್ಯರಾದ ರಮೇಶ್ ಹೆಗಡೆ, ಎಚ್.ಸಿ.ಯೋಗೇಶ್ ಸೇರಿದಂತೆ ಹಲವರು ಬಜೆಟ್ ವಿರುದ್ಧ ಘೋಷಣೆಗಳನ್ನು ಕೂಗುತ್ತ ವೇದಿಕೆಯ ಮುಂಭಾಗದಲ್ಲಿ ಕರ ಪತ್ರಗಳನ್ನು ಹಿಡಿದು ಪ್ರತಿಭಟನೆಗಿಳಿದರು. ಇದ್ಯಾವುದನ್ನೂ ಲೆಕ್ಕಿಸದೇ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಬಜೆಟ್ ಪ್ರತಿಯನ್ನು ಓದಿದರು.

ನಂತರ, ಆಡಳಿತ ಪಕ್ಷದ ಎಲ್ಲ ಸದಸ್ಯರು ಸಭಾಂಗಣದಿಂದ ಹೊರನಡೆದರು. ಬೆನ್ನಲ್ಲೇ ವಿರೋಧ ಪಕ್ಷದವರು ಸಭಾಂಗಣದ ದ್ವಾರದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಬಜೆಟ್ ಸಭೆಯಲ್ಲಿ ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ವೇದಿಕೆಯಲ್ಲಿದ್ದರು.

288.49 ಕೋಟಿ ರೂ. ಬಜೆಟ್ ಗಾತ್ರ | 2020-21ರಲ್ಲಿ ಕೋವಿಡ್ ನಿಂದಾಗಿ ಪಾಲಿಕೆಗೆ ಹೆಚ್ಚುವರಿ ಖರ್ಚು ಸಹ ಆಗಿದೆ. ಆದರೂ ಈ ವರ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಈ ಸಲದ ಬಜೆಟ್ ಗಾತ್ರ 288.49 ಕೋಟಿ ರೂಪಾಯಿ ಇದೆ. ಆರಂಭಿಕ ಶುಲ್ಕ 113.52 ಕೋಟಿ ರೂಪಾಯಿ ಇದ್ದು, ಒಟ್ಟು ಖರ್ಚು 285.67 ಕೋಟಿ ರೂಪಾಯಿ ಇದೆ. ಹೀಗಾಗಿ, ಇದು 2.81 ಕೋಟಿ ರೂ. ಉಳಿತಾಯವಾಗಲಿದೆ.

https://www.suddikanaja.com/2021/02/03/congress-allegation-on-hunasodu-blast-case/

error: Content is protected !!