ಬಂಪರ್ ಗಿಫ್ಟ್, ದುಡಿಯುವ ಕೈಗೆ ಕೆಲಸ, ನಿರುದ್ಯೋಗಿಗೆ ಉದ್ಯೋಗ, ಯಾವೆಲ್ಲ ಸ್ಕಿಲ್ ಟ್ರೈನಿಂಗ್ ಲಭ್ಯ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನರೇಗಾ ಅಡಿ ನೂರು ದಿನಗಳ ಕಾಲ ಕೂಲಿ ಪಡೆದಿರುವ ಕುಟುಂಬಗಳ ಒಬ್ಬ ಸದಸ್ಯನಿಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಹೇಳಿದರು.

READ | ಮಲೆನಾಡಿನ ಭೂ ಕುಸಿತದ ಫೈನಲ್ ರಿಪೋರ್ಟ್ ಸಿಎಂಗೆ ಸಲ್ಲಿಕೆ, ಯಡಿಯೂರಪ್ಪ ಹೇಳಿದ್ದೇನು?

ಯಾವ ಟ್ರೈನಿಂಗ್

  • ಕುಟುಂಬದಲ್ಲಿ 8ನೇ, 10ನೇ, ಪಿ.ಯು.ಸಿ ವಿದ್ಯಾಭ್ಯಾಸ ಪೂರ್ಣ ಅಥವಾ ಅರ್ಧಕ್ಕೆ ಬಿಟ್ಟರೂ ಅವರಿಗೆ ನರೇಗಾ ಯೋಜನೆ ಅಡಿ ಉನ್ನತಿ ಕೌಶ್ಯಲದಡಿ ತರಬೇತಿ ನೀಡಿ ಅರ್ಥಿಕವಾಗಿ ಜೀವನದಲ್ಲಿ ಸಬಲರಾಗಲು ನೆರವು.
  • ಹೈನುಗಾರಿಕೆ, ಆಟೋಮೊಬೈಲ್, ಬ್ಯೂಟಿಪಾರ್ಲರ್, ಮೊಬೈಲ್ ರಿಪೇರಿ, ಕಾಫಿ ಡೇ ಇತರೇ ಸ್ವ ಉದ್ಯೋಗಕ್ಕೆ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸುವುದು
  • 3 ತಿಂಗಳ ಅಭಿಯಾನದಲ್ಲಿ ಭಾಗವಹಿಸುವುದರಿಂದ ಪ್ರತಿ ಕುಟುಂಬಕ್ಕೆ 17,940 ರೂಪಾಯಿ ಆರ್ಥಿಕ ಸಹಾಯ ನರೇಗಾ ಯೋಜನೆಯಡಿ ದೊರಕುವುದು.
  • 10 ದಿನಗಳ ತರಬೇತಿಯಲ್ಲಿ ಆಯಾ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಪ್ರಾಯೋಗಿಕ ಪ್ರಾತ್ಯಕ್ಷಿತೆ ನೀಡಲಾಗುವುದು. ಇದು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ.

ಕೂಲಿಯಲ್ಲಿ ಏರಿಕೆ | ನರೇಗಾ ಕೂಲಿ ಮೊತ್ತವನ್ನು 285 ರೂಪಾಯಿಯಿಂದ 299ಕ್ಕೆ ಏರಿಕೆ ಮಾಡಲಾಗಿದೆ. ಬೇಸಿಗೆಯಲ್ಲಿ ಹಳ್ಳಿ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಮಾನವ ಕೆಲಸಗಳನ್ನು ಹೆಚ್ಚಿಸಲು ಎಲ್ಲ ಗ್ರಾಪಂಗಳಿಗೆ ಸೂಚನೆ ನೀಡಲಾಗಿದೆ ಎಂದು ವೈಶಾಲಿ ಹೇಳಿದರು.

ನರೇಗಾ ಯೋಜನೆಯ ಲಾಭ ಪಡೆಯಬೇಕಾದರೆ ಉದ್ಯೋಗ ಚೀಟಿ ಅಗತ್ಯ. ಒಂದುವೇಳೆ, ಚೀಟಿ ಪಡೆಯದಿದ್ದಲ್ಲಿ ತಕ್ಷಣ ಹೆಸರು ನೋಂದಾಯಿಸಿ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನ ಕೂಲಿ ಕೆಲಸವನ್ನು ನೀಡಲಾಗುವುದು. ಅತಿವಷ್ಟಿ, ಅನಾವೃಷ್ಟಿಯಂತಹ ಸಂದರ್ಭಗಳಲ್ಲಿ ಇದನ್ನು 150 ದಿನವರೆಗೆ ವಿಸ್ತರಿಸಲಾಗುತ್ತಿದೆ. ಕೆರೆಗಳ ಹೂಳೆತ್ತುವುದು, ಜಲ ಸಂರಕ್ಷಣೆ, ತಡೆಗೋಡೆ ನಿರ್ಮಾಣ, ತೋಟಗಾರಿಕೆ, ಅರಣ್ಯೀಕರಣ ಹೀಗೆ ಹಲವು ಕಾರ್ಯಗಳನ್ನು ಯೋಜನೆ ಅಡಿ ಪಡೆಯಬಹುದು. 75ನೇ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಜನರನ್ನು ಸ್ವಾವಲಂಬಿಗಳಾಗಿ ಮಾಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಯೋಜನಾ ನಿರ್ದೇಶಕಿ ನಂದಿನಿ, ಯೋಜನಾಧಿಕಾರಿ ಉಮಾ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಲ್ಲಪ್ಪ ಹಾಜರಿದ್ದರು.

https://www.suddikanaja.com/2020/11/29/cm-announced-1-crore-to-kuvempu-university/

error: Content is protected !!