ಹೋರಾಟದ ಮುಂದಾಳತ್ವ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಕೋಲಾರ, ರಾಮನಗರಕ್ಕೆ ಎತ್ತಂಗಡಿ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ. ಮುಷ್ಕರದ ಮುಂದಾಳತ್ವ ವಹಿಸಿದ್ದ ನೌಕರರ ಒಗಟ್ಟು ಹೆಣೆಯುವುದಕ್ಕಾಗಿ ಹೋರಾಟದ ಮುಂದಾಳತ್ವ ವಹಿಸಿದ್ದ ನೌಕರರನ್ನು ಎತ್ತಂಗಡಿ ಮಾಡಲಾಗಿದೆ.

READ | ವಿಶ್ವವಿಖ್ಯಾತ ಜೋಗದ ಆವರಣದಲ್ಲಿ ಮದ್ಯದ ಖಾಲಿ ಬಾಟಲ್! ತುಂಬಿ ತುಳುಕುತ್ತಿದೆ ಕಸದ ರಾಶಿ, ಅಧಿಕಾರಿಗಳು ಇತ್ತ ವಹಿಸುವರೇ ಗಮನ?

ಸಾಕಷ್ಟು ಪ್ರಯತ್ನದ ಬಳಿಕವೂ ನೌಕರರ ಒಗ್ಗಟ್ಟನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ಕೆಲವರನ್ನು ಕರೆದು ಬಸ್ ರಸ್ತೆಗಿಳಿಸಲಾಗಿತ್ತು. ಹೀಗಾಗಿ, ಶಿವಮೊಗ್ಗ ವಿಭಾಗ ವ್ಯಾಪ್ತಿಯ ವಿವಿಧ ಘಟಕಗಳಲ್ಲಿ ಒಟ್ಟು 18 ಜನರನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ 13 ಚಾಲಕರು, ನಿರ್ವಾಹಕರು, 5 ಮೆಕ್ಯಾನಿಕಲ್ ಹುದ್ದೆಯವರಿದ್ದಾರೆ. ವಿಶೇಷವೆಂದರೆ, ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದ 13 ಸಿಬ್ಬಂದಿಯನ್ನು ರಾಮನಗರಕ್ಕೆ ಹಾಗೂ ಐವರನ್ನು ಕೋಲಾರಕ್ಕೆ ಟ್ರಾನ್ಸ್ ಫರ್ ಮಾಡಲಾಗಿದೆ. ಜತೆಗೆ, ವರ್ಗಾವಣೆ ಆದೇಶ ಹೊರಡಿಸಿದ ಏಳು ದಿನಗಳೊಳಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ಸಹ ನೀಡಲಾಗಿದೆ.

ವರ್ಗಾವಣೆಯ ವಿರುದ್ಧ ಸಿಡಿದೆದ್ದಿರುವ ನೌಕರರು, ಈ ಬೆದರಿಕೆಗಳಲ್ಲಿ ಅಂಜುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬದೊಂದಿಗೆ ಪ್ರತಿಭಟನೆಗೆ ಇಳಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

 

error: Content is protected !!