ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ ನಾಲ್ವರು ಕೆ.ಎಸ್.ಆರ್.ಟಿ.ಸಿ ನೌಕರರು ಸಸ್ಪೆಂಡ್, ಡ್ಯೂಟಿಗೆ ಹಾಜರಾಗದ ನಾಲ್ವರ ಎತ್ತಂಗಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರದ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಿದ್ದ ಸಿಬ್ಬಂದಿಗೆ ಅಡ್ಡಿ ಪಡಿಸಿದ್ದಾರೆ ಎಂಬ ಆರೋಪದ ಮೇರೆಗೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ. ಇನ್ನೂ ನಾಲ್ವರನ್ನು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡಿ ಗುರುವಾರ ಆದೇಶಿಸಲಾಗಿದೆ.
ಚಾಲಕ ವೀರೇಶ್‌ ಹಂಡೆಗಾರ ಮತ್ತು ಚಾಲಕ- ನಿರ್ವಾಹಕ ಶಿವಕುಮಾರ್‌ ಹಾಗೂ ಚಾಲಕ- ನಿರ್ವಾಹಕರಾದ ತ್ಯಾವರ ನಾಯ್ಕ್‌, ಎಚ್‌.ಇ.ಪ್ರಕಾಶ್‌ ಎಂಬುವವರನ್ನು ಅಮಾನತುಗೊಳಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್‌.ನವೀನ್‌ ಆದೇಶ ಹೊರಡಿಸಿದ್ದಾರೆ.
ಏನಾಗಿತ್ತು | ಏಪ್ರಿಲ್ 12ರಂದು ಸಾಗರ ಘಟಕದ ತರಬೇತಿ ಚಾಲಕ ಪ್ರಶಾಂತ್‌ ನಾರಾಯಣ ನಾಯ್ಕ ಎಂಬಾತ ಕರ್ತವ್ಯಕ್ಕೆ ಹಾಜರಾಗಿದ್ದ. ಆತ ಸಾಗರದಿಂದ ಶಿವಮೊಗ್ಗಕ್ಕೆ ಬಸ್ ಚಲಾಯಿಸಿಕೊಂಡು ಬಂದಿದ್ದು, ಮರಳಿ ಸಾಗರಕ್ಕೆ ತೆರಳುವಾಗ 20ಕ್ಕೂ ಅಧಿಕ ಜನ ಬಸ್‌ ತಡೆದಿದ್ದಾರೆ. ಚಾಲಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಕಾರಣಕ್ಕಾಗಿ, ವೀರೇಶ್‌ ಮತ್ತು ಶಿವಕುಮಾರ್‌ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಏಪ್ರಿಲ್ 12ರಂದು ಶಿವಮೊಗ್ಗ-ಭದ್ರಾವತಿ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಟಿ.ಡಿ.ಮಂಜುನಾಥ್‌, ನಿರ್ವಾಹಕ ಶ್ರೀಧರ್‌ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದ ಮೇರೆಗೆ ತ್ಯಾವರ ನಾಯ್ಕ್‌, ಪ್ರಕಾಶ್‌ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರ್ಗಾವಣೆಗೇನು ಕಾರಣ, ಯಾರು ವರ್ಗಾವಣೆ |ಅನಿರ್ದಿಷ್ಟ ಮುಷ್ಕರಕ್ಕೆ ಪರೋಕ್ಷವಾಗಿ ಬೆಂಬಲಿಸಿ ಕರ್ನಾಟಕ ಅಗತ್ಯ ಸೇವೆ ನಿರ್ವಹಣೆ ಕಾಯ್ದೆ 2013ರ ಅನ್ವಯ ಜನವರಿಯಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ನಾಲ್ವರು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ನಿರ್ವಾಹಕರಾದ ಎಸ್‌.ಕವಿತಾ ಮತ್ತು ಎಚ್‌.ಗೌರಮ್ಮ ಎಂಬುವವರನ್ನು ಶಿವಮೊಗ್ಗದಿಂದ ಸಾಗರಕ್ಕೆ ಹಾಗೂ ನಿರ್ವಾಹಕಿ ಟಿ.ಎನ್‌.ವಸಂತಕುಮಾರಿ, ಚಾಲಕಿ- ನಿರ್ವಾಹಕಿ ಪಿ.ಜಿ.ಶಂಕುತಲಮ್ಮ ಅವರನ್ನು ಭದ್ರಾವತಿಯಿಂದ ಸಾಗರಕ್ಕೆ ವರ್ಗಾವಣೆ ಮಾಡಿ‌ ಆದೇಶಿಸಲಾಗಿದೆ.

https://www.suddikanaja.com/2020/11/20/bihar-man-found-in-sagar/

error: Content is protected !!