ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ತಿಂಗಳ ಹಿಂದಷ್ಟೇ ಶೂನ್ಯಕ್ಕೆ ತಲುಪಿದ್ದ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ ಸಾವಿರ ಗಡಿ ದಾಟಿದೆ. ಅಲ್ಲದೇ ದಿನೇ ದಿನೆ ಕೊರೊನಾ ಎರಡನೇ ಅಲೆ ಗಂಭೀರ ಸ್ವರೂಪ ತಾಳುತ್ತಿದೆ. ಬುಧವಾರ ಸಹ ಕೊರೊನಾ ಒಬ್ಬರನ್ನು ಬಲಿ ಪಡೆದಿದ್ದು, ಇದುವರೆಗೆ ಮೃತರ ಸಂಖ್ಯೆ 357ಕ್ಕೆ ತಲುಪಿದೆ.
ಇಂದು ಎಂಟು ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ 166 ಹೊಸ ಪ್ರಕರಣ ಪತ್ರೆಯಾಗಿವೆ. 68 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಅವರನ್ನು ಬಿಡುಗಡೆ ಮಾಡಲಾಗಿದೆ.
ಎಲ್ಲಿ ಎಷ್ಟು ಜನರ ಚಿಕಿತ್ಸೆ | ಮೆಗ್ಗಾನ್ ಆಸ್ಪತ್ರೆಯಲ್ಲಿರುವ ಕೋವಿಡ್ ವಾರ್ಡ್ ನಲ್ಲಿ 288 , ಖಾಸಗಿ ಆಸ್ಪತ್ರೆ 66, ಹೋಮ್ ಐಸೋಲೇಷನ್ 763, ಟ್ರಿಯೇಜ್ 35 ಸೇರಿ ಒಟ್ಟು 1,152 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ವರದಿ | ಶಿವಮೊಗ್ಗ 72, ಭದ್ರಾವತಿ 10, ಶಿಕಾರಿಪುರ 5, ತೀರ್ಥಹಳ್ಳಿ 9, ಸೊರಬ 9, ಸಾಗರ 35, ಹೊಸನಗರ 4 ಹಾಗೂ ಹೊರ ಜಿಲ್ಲೆಯ 22 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದು 3,046 ಜನರ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. 2,193 ಜನರ ವರದಿ ನೆಗೆಟಿವ್ ಬಂದಿದೆ.