ಮುಂದುವರಿದ ಕೊರೊನಾ ಅಟ್ಟಹಾಸ, ಒಂದು ಸಾವು, ಕೊರೊನಾ ಡಬಲ್ ಸೆಂಚ್ಯೂರಿ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೊರೊನಾ‌ ಅಟ್ಟಹಾಸ ಮುಂದುವರಿದಿದೆ. ಗುರುವಾರ ಸಹ ಒಬ್ಬನನ್ನು ಬಲಿ ಪಡೆದಿರುವ ಕಾಯಿಲೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು 358ಕ್ಕೇರುವಂತೆ ಮಾಡಿದೆ.

READ | ನೈಟ್, ವೀಕೆಂಡ್ ಕರ್ಫ್ಯೂ ಏನಿರುತ್ತೆ, ಏನಿರಲ್ಲ, ಮದ್ವೆ ಮಾಡಬಹುದಾ, ನೈಟ್ ಡ್ಯೂಟಿ ಏನು ಕಥೆ, ಎಲ್ಲ ಪ್ರಶ್ನೆಗೂ ಡಿಸಿ ಉತ್ತರಿಸಿದ್ದಾರೆ

ಕಾಯಿಲೆಯ ಲಕ್ಷಣಗಳಿಂದ ಬಳಲುತಿದ್ದ ಶಿವಮೊಗ್ಗ ನಗರದ 56 ವರ್ಷದ ವ್ಯಕ್ತಿಯನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವನ್ನಪ್ಪಿದ್ದಾನೆ.
ಇಂದು 244 ಮಂದಿಗೆ ಕೊರೊನಾ ತಗಲಿದೆ. ಅದರಲ್ಲಿ ಹತ್ತು ವಿದ್ಯಾರ್ಥಿಗಳು ಹಾಗೂ ಒಬ್ಬರು ಸಿಬ್ಬಂದಿ ಇದ್ದಾರೆ. ಕಾಯಿಲೆಯಿಂದ ಗುಣಮುಖರಾದ 89 ಜನರನ್ನು ಬಿಡುಗಡೆಗೊಳಿಸಲಾಗಿದೆ.
ರಾಜ್ಯ ಸರ್ಕಾರ ನಿರ್ದೇಶನದಂತೆ ಮಾದರಿ ಸಂಗ್ರಹ ಕಾರ್ಯ ಚುರುಕಾಗಿ ನಡೆಯುತ್ತಿದೆ. ಗುರುವಾರ 3,213 ಮಾದರಿಯನ್ನು ಸಂಗ್ರಹಿಸಿದ್ದು, 2,228 ವರದಿಗಳು ನೆಗೆಟಿವ್‌ ಬಂದಿವೆ.
ಸಕ್ರಿಯ ಪ್ರಕರಣ 1,307 | ಸಕ್ರಿಯ ಪ್ರಕರಣಗಳ ಸಂಖ್ಯೆ 1,307ಕ್ಕೆ ತಲುಪಿದೆ. ಈ ಪೈಕಿ, ಮೆಗ್ಗಾನ್ ನಲ್ಲಿ 296, ಖಾಸಗಿ ಆಸ್ಪತ್ರೆ 104, ಹೋಮ್‌ ಐಸೋಲೇಷನ್‌ 844 ಹಾಗೂ ಟ್ರಿಯಾಜ್‌ ನಲ್ಲಿ 63 ಜನರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 118, ಭದ್ರಾವತಿ 35, ಶಿಕಾರಿಪುರ 18, ತೀರ್ಥಹಳ್ಳಿ 29, ಸೊರಬ 11, ಸಾಗರ 15, ಹೊಸನಗರ 6, ಹೊರ ಜಿಲ್ಲೆಯ 12 ಪ್ರಕರಣಗಳಿವೆ.

https://www.suddikanaja.com/2021/04/17/covid-high-alert-in-shivamogga/

 

error: Content is protected !!