ಅಂಗನವಾಡಿಗೆ ಬಡಿದ ಸಿಡಿಲು, ವಸ್ತುಗಳು ಸುಟ್ಟು ಭಸ್ಮ

 

 

ಸುದ್ದಿ ಕಣಜ.ಕಾಂ
ಹೊಸನಗರ: ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಲೋನಕೊಪ್ಪ ಗ್ರಾಮದಲ್ಲಿ ಅಂಗನವಾಡಿ ಕಟ್ಟಡವೊಂದಕ್ಕೆ ಸಿಡಿಲು ಬಡಿದಿದ್ದು, ಒಳಗಿದ್ದ ವಸ್ತುಗಳ ಸುಟ್ಟು ಭಸ್ಮವಾಗಿವೆ.

READ | ಕಾರಿನಲ್ಲಿ ಸಿಲಿಂಡರ್ ಸ್ಫೋಟ, ಮಾಲೀಕ ಜಸ್ಟ್ ಮಿಸ್

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿತ್ತು. ಆದರೆ, ಸಿಡಿಲು ಬಡಿದಿರುವುದರಿಂದ ವಿದ್ಯುತ್ ಸಂಪರ್ಕ, ಮಕ್ಕಳ ಆಟಿಕೆ, ಪುಸ್ತಕ, ವಿದ್ಯುತ್ ಮೀಟರ್ ಸೇರಿದಂತೆ ಹಲವು ವಸ್ತುಗಳು ಸುಟ್ಟಿವೆ.

ಭಾನುವಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!