‘ರೆಮಿಡಿಸಿವರ್ ಪಡೆದವರೆಲ್ಲ ಬದುಕುತ್ತಾರೆಂಬ ಭ್ರಮೆ ಬೇಡ, ಶಿವಮೊಗ್ಗದಲ್ಲಿ ಈ ಇಂಜೆಕ್ಷನ್ ತೆಗೆದುಕೊಂಡ ಹಲವರು ಮೃತಪಟ್ಟಿದ್ದಾರೆ’

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜನರು ಮೊದಲು ರೆಮಿಡಿಸಿವಿರ್ ಭ್ರಮೆಯಿಂದ ಹೊರಗೆ ಬರೆಬೇಕಾಗಿದೆ. ಇದನ್ನು ಎಲ್ಲರಿಗೂ ನೀಡುವುದಿಲ್ಲ. ಹಾಗೂ ಪಡೆದವರೆಲ್ಲ ಬದುಕುತ್ತಾರೆ ಎಂದೇನಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

VIDEO REPORT

ನಗರದ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಂಗಳವಾರ ನಡೆದ ಹಿರಿಯ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೊರೊನಾ ಪಾಸಿಟಿವ್ ವ್ಯಕ್ತಿಗಳಿಗೆ ರೆಮಿಡಿಸಿಯರ್ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬುವುದಕ್ಕೆ ಆಧಾರವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ರೋಗಿಗಳ ಅಂಕಿ ಅಂಶಗಳನ್ನು ನೋಡಿದರೂ ಇದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

READ | ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತದ ಬಗ್ಗೆ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದೇನು?

ಜಿಲ್ಲೆಯಲ್ಲಿ ಇದುವರೆಗೆ ಗುಣಮುಖರಾಗಿರುವ ಶೇ.80ರಷ್ಟು ಮಂದಿಗೆ ಈ ಇಂಜೆಕ್ಷನ್ ನೀಡಲಾಗಿರಲಿಲ್ಲ ಎಂಬುವುದನ್ನು ಗಮನಿಸಬೇಕಾಗಿದೆ. ಅದೇ ರೀತಿ ಕೊರೊನಾದಿಂದ ಸಾವಿಗೀಡಾದ ಎಲ್ಲ 15 ಮಂದಿಗೂ ಸದರಿ ಇಂಜೆಕ್ಷನ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ಸಲಹೆ ಅನುಸರಿಸಬೇಕು ಎಂದು ಮನವಿ ಮಾಡಿದರು.

ಒಂದುವೇಳೆ, ಇಂಜೆಕ್ಷನ್ ಬೇಕೇ ಬೇಕು ಎಂದಾದರೆ ಅನಿವಾರ್ಯವಾಗಿ ಕೊಡಬೇಕಾಗುತ್ತದೆ. ಆದರೆ, ಜನರು ಇಂಜೆಕ್ಷನ್ ತೆಗೆದುಕೊಂಡ ಬಳಿಕ ಗುಣಮುಖರಾಗುತ್ತೇವೆ ಎಂದು ಭ್ರಮಯಿಂದ ಹೊರಗಡೆ ಬರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಎಸ್.ಪಿ.ಲಕ್ಷ್ಮೀಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

https://www.suddikanaja.com/2021/04/26/covid-treatment-under-ayushman-bharat/

error: Content is protected !!