ಏ.28ರಿಂದ ಅಂಚೆ ಕಚೇರಿ ಹಾಫ್ ಡೇ ಮಾತ್ರ, ಬದಲಾದ ಸಮಯ ಇಲ್ಲಿದೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಸರ್ಕಾರವು 14 ದಿನಗಳ ಲಾಕ್‍ ಡೌನ್ ಘೋಷಿಸಿರುುವುದರಿಂದ ಏಪ್ರಿಲ್ 28 ರಿಂದ ಮೇ 10 ರ ವರೆಗೆ ಶಿವಮೊಗ್ಗ ವಿಭಾಗದ ಎಲ್ಲ ಅಂಚೆ ಕಚೇರಿಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಸೇವೆಯನ್ನು ಒದಗಿಸಲಿವೆ ಎಂದು ಅಂಚೆ ಅಧೀಕ್ಷಕ ಜಿ.ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ರಿಜಿಸ್ಟರ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್ ಗಳನ್ನು ಬುಕಿಂಗ್ ಮಾಡುವಾಗ ವಿಳಾಸದಾರರ ಮೊಬೈಲ್ ಸಂಖ್ಯೆನ್ನು ಕಡ್ಡಾಯವಾಗಿ ನಮೂದಿಸುವುದು. ತಮಗೆ ಬಂದಿರುವ ಪತ್ರಗಳ ಖಾತರಿಯನ್ನು ಸಂಬಂಧಪಟ್ಟ ಅಂಚೆಕಚೇರಿಯಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ, ಖಚಿತಪಡಿಸಿಕೊಂಡು ನಂತರ ಭೇಟಿ ನೀಡುವಂತೆ ತಿಳಿಸಿದ್ದಾರೆ.

error: Content is protected !!