50ಕ್ಕೂ ಅಧಿಕ ಜನ ಮದುವೆಗೆ ಹಾಜರ್, ಪಿಡಿಒ ಸಸ್ಪೆಂಡ್ ಶಿಕ್ಷೆ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೋವಿಡ್‌ ಮಾರ್ಗಸೂಚಿ ಅನ್ವಯ ಮದುವೆಯಲ್ಲಿ ಗರಿಷ್ಠ 50 ಜನ ಮಾತ್ರ ಸೇರಲು ಅವಕಾಶವಿದೆ. ಆದರೆ, ಮದುವೆಯಲ್ಲಿ ನೂರಕ್ಕೂ ಹೆಚ್ಚು ಜನ‌‌ರಿದ್ದನ್ನು ಖುದ್ದು ವೀಕ್ಷಿಸಿದ ಜಿಪಂ‌ ಸಿಇಒ ಅವರು ಕುಂಚೇನಹಳ್ಳಿ‌ ಪಿಡಿಒಗೆ ಅಮಾನತುಗೊಳಿಸಿದ್ದಾರೆ.

READ |ಕಾನೂನು ಸೇವೆ ಪಡೆಯಲು ಕೋರ್ಟ್ ಗೆ ಬರಬೇಕಿಲ್ಲ, ಈ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ

ಎಸ್.ಕಾಂತರಾಜ್ ಎಂಬುವವರನ್ನು ಅಮಾನತುಗೊಳಿಸಲಾಗಿದ್ದು , ಇವರು ತಮ್ಮ‌ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಮದುವೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಈ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಕಾರಣಕ್ಕೆ ಸಸ್ಪೆಂಡ್ ಮಾಡಿ ಸಿಇಒ ಎಂ.ಎಲ್.ವೈಶಾಲಿ ಆದೇಶಿಸಿದ್ದಾರೆ.

error: Content is protected !!