ಕರ್ಫ್ಯೂ ನಿಯಮ ಉಲ್ಲಂಘನೆ, 6 ದಿನದಲ್ಲಿ ಬಿತ್ತು ಲಕ್ಷಾಂತರ ದಂಡ, ಸೀಜ್ ಆದ ವಾಹನಗಳೆಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದೆ. ಆದರೆ, ಮಾರ್ಗಸೂಚಿಯನ್ನು ಉಲ್ಲಂಘಿಸಿದ 465 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

READ | ಲಸಿಕೆಗಾಗಿ ಮುಂದುವರಿದ ಸರದಿ, ಹೇಗಿದೆ‌ ಸ್ಥಿತಿ?

ಏಪ್ರಿಲ್ 25ರಿಂದ 30ರ ವರೆಗೆ ಅಂದರೆ ಆರು ದಿನಗಳಲ್ಲಿ 465 ವಾಹನಗಳನ್ನು ಸ್ವಾಧೀನ ಪಡೆದು ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟು 1,079 ಪ್ರಕರಣಗಳು ದಾಖಲಾಗಿದ್ದು, 4,94,900 ದಂಡ ವಿಧಿಸಲಾಗಿದೆ.

ಆಟೋ, ಕಾರು, ಬೈಕ್ ಮೇಲೆ ದಂಡ | ಲಾಕ್ ಡೌನ್ ಉಲ್ಲಂಘಿಸಿ ಓಡಾಡುತ್ತಿದ್ದ ವಾಹನಗಳಿಗೆ ಪೊಲೀಸರು ನಿರಂತರ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಗರದ ಪ್ರಮುಖ ಸರ್ಕಲ್ ಗಳಲ್ಲಿ ಗಸ್ತಿನಲ್ಲಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅನಗತ್ಯವಾಗಿ ಓಡಾಡುವವರ ಮೇಲೆ ದಂಡ ಹಾಕಿದ್ದು, ಆರು ದಿನಗಳಲ್ಲಿ ಭಾರಿ ಮೊತ್ತದ ಹಣ ವಸೂಲಿ ಮಾಡಿದ್ದಾರೆ. ಕಾರು, ದ್ವಿಚಕ್ರ ವಾಹನ ಮತ್ತು ಆಟೋಗಳ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.

ಯಾವ ದಿನ ಎಷ್ಟು ದಂಡ (ಏಪ್ರಿಲ್ ತಿಂಗಳು)
ದಿನಾಂಕ ವಾಹನ
ಸೀಜ್
ಪ್ರಕರಣ ದಂಡ
25.04.21 49 172 82,800
26.04.21 31 168 76,800
27.04.21 10 163 77,600
28.04.21 100 245 1,16,600
29.04.21 123 179 76,300
30.04.21 152 152 64,800
ಒಟ್ಟು 465 1,079 4,94,900

https://www.suddikanaja.com/2021/04/02/covid-positive-cases-raise-in-shivamogga/

error: Content is protected !!