‘ಪಾರು’ ಧಾರಾವಾಹಿಯಿಂದ ಮಾನ್ಸಿ ಜೋಶಿ ಎಕ್ಸಿಟ್, ಜರ್ನಿಯ ಅನುಭವ ಇಲ್ಲಿ ಹಂಚಿಕೊಂಡಿದ್ದಾರೆ…

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕನ್ನಡದ ಕಿರುತೆರೆಯಲ್ಲಿ ವಿಲನ್ ಪಾತ್ರದ ಮೂಲಕ ಮನೆಯ ಮಾತಾಗಿರುವ ಸ್ನಿಗ್ಧ ಸುಂದರಿ ‘ಮಾನ್ಸಿ ಜೋಶಿ’ ಅವರು ‘ಪಾರು’ ಧಾರಾವಾಹಿಯ ಅನುಷ್ಕಾ ಪಾತ್ರ ಮುಕ್ತಾಯವಾಗುತ್ತಿರುವುದರಿಂದ ಹೊರಬರುತಿದ್ದಾರೆ.
ಈ ಬಗ್ಗೆ ಖುದ್ದು ಮಾನ್ಸಿ ಅವರೇ ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

mansi insta‘ನನ್ನ ಎಲ್ಲ ಅಭಿಮಾನಿಗಳು ಮತ್ತು ಸ್ನೇಹಿತರಿಗೆ, ‘ಪಾರು’ ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರದಲ್ಲಿ ನನ್ನ ಪಾತ್ರವು ಕೊನೆಗೊಂಡಿದೆ ಎಂದು ನೀವು ತಿಳಿಸಲು ನಾನು ಬಯಸುತ್ತೇನೆ.’ ಎಂದು ಹೇಳಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾರು’ ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರದ ಮೂಲಕ ಮಾನ್ಸಿ ಎಲ್ಲರ ಮನೆ ಮಾತಾಗಿದ್ದಾರೆ. ‘ತನಗೆ ಇಂತಹ ಪಾತ್ರ ನೀಡಿ ಪ್ರೋತ್ಸಾಹಿಸಿದ್ದಕ್ಕೆ ಧಾರಾವಾಹಿಯ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.’

READ | ಮಲೆನಾಡಿನ ಬೆಡಗಿ ಬೆಳ್ಳಿತೆರೆಯಲ್ಲಿ ಹವಾ

ಹಾರ್ಟ್ ಬ್ರೇಕಿಂಗ್ ನ್ಯೂಸ್ | ಅನುಷ್ಕಾ ಪಾತ್ರದ ಮುಕ್ತಾಯದ ಮೂಲಕ ಅಭಿಮಾನಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ನೀಡಿರುವ ಮಾನ್ಸಿ ಅವರು ಮುಂದುವರಿದು, ‘ಶೀಘ್ರವೇ ಹೊಸ ಯೋಜನೆಯ ಜೊತೆಗೆ ಬರುತ್ತೇನೆ. ನಟನೆಯಿಂದ ಎಲ್ಲರನ್ನು ರಂಜಿಸುತ್ತೇನೆ’ ಎಂದು ಗುಡ್ ನ್ಯೂಸ್ ನೀಡಿದ್ದಾರೆ.

ಬಹುಭಾಷೆಯಲ್ಲಿ ನಟನೆ | ಮಾನ್ಸಿ ಜೋಶಿ ಅವರು ‘ನಾಯಕಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರವಾದ ಸೌಜನ್ಯಾ ಆಗಿ ಬಣ್ಣ ಹಚ್ಚಿದ್ದಾರೆ. ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅನ್ವಿತಾ ಆಗಿ, ತಮಿಳಿನ ‘ಅನುಬುಡನ್ ಖುಷಿ’ ಸೀರಿಯಲ್ ನಲ್ಲಿ ನಾಯಕಿ ಖುಷಿ ಪಾತ್ರದಲ್ಲಿ ಮನರಂಜಿಸಿದ್ದಾರೆ. ಕಸ್ತೂರಿ ನಿವಾಸಿ ಸೀರಿಯಲ್ ನ ರಿಮೇಕ್ ನಲ್ಲೂ ನಟಿಸಿದ್ದಾರೆ. ಹೀಗೆ ಪರ ಭಾಷೆಯಲ್ಲೂ ತಮ್ಮ ನಟನೆಯಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

READ | ಲಖ್ನೌನಲ್ಲಿ ನಡೆದ ರೀಯಲ್ ಘಟನೆ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಲ್ಲಿ ಮಿಂಚಿರುವ ಶಿವಮೊಗ್ಗೆಯ ಪ್ರತಿಭೆಗಳು, ಯಾವುದೀ ಚಿತ್ರ, ಎಂದು ತೆರೆಗೆ?

ಬೇಸಿಕಲಿ ನಾನು ಸಾಫ್ಟ್ ಹುಡುಗಿ | ಪಾರು ಧಾರಾವಾಹಿಯ ನಟನೆಯ ಜರ್ನಿಯ ಅನುಭವವನ್ನು ಹಂಚಿಕೊಂಡಿರುವ ಮಾನ್ಸಿ, ‘ಬೇಸಿಕಲಿ ನಾನು ತುಂಬಾ ಸಾಫ್ಟ್ ಹುಡುಗಿ. ಆದರೆ, ಪಾರುದಲ್ಲಿಯ ವಿಲನ್ ರೋಲ್ ನಿರ್ವಹಿಸಿದ್ದು ಸತ್ವ ಪರೀಕ್ಷೆಯೇ ಸರಿ. ಕೆಲವೊಮ್ಮೆ ಏನೂ ತಿಳಿಯದ ಮುಗ್ಧೆಯಾಗಿ, ಮಾರನೇಯ ಕ್ಷಣವೇ ಜ್ವಾಲೆ ಸೂಸುವ ಸಿಟ್ಟನ್ನು ಹೊರಹಾಕುವುದು. ಎರಡೂ ಭಾವವನ್ನು ಸಮತೋಲನವಾಗಿ ನಿರ್ವಹಿಸಬೇಕಿತ್ತು. ಧಾರಾವಾಹಿಯಲ್ಲಿ ಅಚ್ಚ ಕನ್ನಡದ ಮೂಲಕವೇ ಜನರ ಮನಸ್ಸಿನಲ್ಲಿ ಜಾಗ ಮಾಡಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

error: Content is protected !!