ಹೋಮ್‌ ಐಸೋಲೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಯ ಬಲಿ‌ ಪಡೆದ ಕೊರೊನಾ, ಪಾಸಿಟಿವ್ ಬಂದ ನಾಲ್ಕೇ ದಿನದಲ್ಲಿ ಸಾವು!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರೋಗ್ಯದಲ್ಲಿ ಹೆಚ್ಚೇನೂ ಸಮಸ್ಯೆ ಇರಲಿಲ್ಲ. ಹೀಗಾಗಿ, ಹೋಮ್ ಐಸೋಲೇಷನ್ ನಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೊನಾ ಬಲಿ ಪಡೆದಿದೆ.

READ | ಮುಂದುವರಿದ ಕೊರೊನಾ ಮಾರಣಹೋಮ, ಒಂದೇ ದಿನ 15 ಸಾವು, ಯಾವ ತಾಲೂಕಿನಲ್ಲಿ‌ ಎಷ್ಟು ಮರಣ

ತಿಮ್ಮಪ್ಪ‌(50) ಎಂಬುವವರೇ ಕೊರೊನಾದಿಂದ ನಿಧನರಾದ ಪೊಲೀಸ್ ಸಿಬ್ಬಂದಿ. ಇವರು ಎಸ್‌.ಪಿ ಕಚೇರಿಯ ಸಿಬ್ಬಂದಿ ವಿಭಾಗದಲ್ಲಿ ಶಾಖಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತಿದ್ದರು. ಮೇ 1ರಂದು‌ ಕೊರೊನಾ ಪಾಸಿಡಿವ್ ಬಂದಿದೆ. ರೋಗದ ತೀವ್ರ ಲಕ್ಷಣ ಇಲ್ಲದ್ದರಿಂದ ಹೋಮ್ ಐಸೋಲೇಷನ್ ನಲ್ಲಿದ್ದರು. ಏಕಾಏಕಿ ಮೇ 2ರ ರಾತ್ರಿ‌ ಆರೋಗ್ಯ ಹದಗೆಟ್ಟಿದೆ. ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ನಿಧನ ಹೊಂದಿದ್ದಾರೆ.

error: Content is protected !!