ಫೀಲ್ಡಿಗಿಳಿದ ಕಮಿಷ್ನರ್, ನಿಯಮ ಉಲ್ಲಂಘಿಸಿದವರಿಗೆ ವಾರ್ನಿಂಗ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಅವರು ಬುಧವಾರ ಫೀಲ್ಡಿಗಿಳಿದು ಕೋವಿಡ್ ಮಾರ್ಗಸೂಚಿ ಪಾಲಿಸದ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದರು.

ಬೆಳ್ಳಂಬೆಳಗ್ಗೆ ಗೋಪಿ ವೃತ್ತ, ಗಾಂಧಿ ಬಜಾರ್, ಪುರಲೆ ಸೇರಿದಂತೆ ಹಲವೆಡೆ ಭೇಟಿ ನೀಡಿದರು. ಪಾಲಿಕೆಯಿಂದ ಅಧಿಕಾರಿಗಳ ತಂಡ ರಚಿಸಿದ್ದು ಅವರ ಕಾರ್ಯವೈಖರಿಯನ್ನು ವೀಕ್ಷಿಸಿದರು. ಯಾವುದೇ ರೀತಿಯ ಪ್ರಮಾದಗಳಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

ವಾಹನಗಳನ್ನು ತಡೆದು ಮಾಸ್ಕ್ ಧರಿಸದವರಿಗೆ ಅಧಿಕಾರಿಗಳ ನೇತೃತ್ವದಲ್ಲಿ ದಂಡ ವಿಧಿಸಿದರು.

error: Content is protected !!