ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಅಭಾವ, ಕೋವಿಡ್ ರೋಗಿಗಳಲ್ಲಿ ಹೆಚ್ಚಿದ ಆತಂಕ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಗಾಗಿ ಹಾಹಾಕಾರ ಶುರುವಾಗಿದೆ. ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ 400 ಆಕ್ಸಿಜನ್ ಬೆಡ್ ಮೀಸಲು ಇರಿಸಲಾಗಿದೆ. ಆದರೆ, ಎಲ್ಲ ಹಾಸಿಗೆಗಳು ಭರ್ತಿ ಆಗಿದ್ದು, ಗುರುವಾರ ಹೌಸ್ ಫುಲ್ ಬೋರ್ಡ್ ಅಳವಡಿಸಲಾಗಿದೆ.

READ | ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಕಾಡುಕೋಣದ ಶವ

ಶಿವಮೊಗ್ಗ ಮಾತ್ರವಲ್ಲದೇ ಮೆಗ್ಗಾನ್ ಗೆ ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾವೇರಿಯಿಂದಲೂ ಜನ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಆದರೆ, ಈಗ ಆಕ್ಸಿಜನ್ ಬೆಡ್ ಲಭ್ಯವಿಲ್ಲದ್ದ ವಿಚಾರ ಸೋಂಕಿತರನ್ನು ಆತಂಕಕ್ಕೀಡು ಮಾಡಿದೆ.

error: Content is protected !!