ಕೊರೊನಾ ಚಿಕಿತ್ಸೆ ಬೇಡವೆಂದು ಭತ್ತದ ಗದ್ದೆಗೆ ಹಾರಿದ ಸೋಂಕಿತ, ಹಿಡಿದು ಕರೆತಂದ ಸಿಬ್ಬಂದಿ, ಮುಂದೇನಾಯ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಕೊರೊನಾ ರೋಗಿಯೊಬ್ಬ ಚಿಕಿತ್ಸೆ ಬೇಡವೆಂದು ಗದ್ದೆಗೆ ಹಾರಿ ಪರಾರಿಯಾಗಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ.

READ | ಬಿಗ್ ಬಾಸ್ ರಿಯಾಲಿಟಿ ಶೋ ಅಭಿಮಾನಿಗಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು ಗೊತ್ತಾ?

ಗಾಂಧಿ ಬಜಾರ್ ನಿವಾಸಿಯೊಬ್ಬನು ಓಡಿ ಹೋಗಲು ಯತ್ನಿಸಿದ್ದು ಆಸ್ಪತ್ರೆ ಸಿಬ್ಬಂದಿ ಆತನನ್ನು ಹಿಡಿದು ವಾಪಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
IMG 20210509 WA0003

ಓಡಿ ಹೋಗಲು ಕಾರಣ | ಪ್ರೀತಿಯಲ್ಲಿ ಮೋಸ ಹೋಗಿದ್ದೇನೆಂಬ ಕಾರಣಕ್ಕೆ ಈತ ನಿದ್ರೆ ಮಾತ್ರೆ ಸೇವನೆ ಮಾಡಿದ್ದ. ಅಸ್ವಸ್ಥಗೊಂಡಿದ್ದಕ್ಕೆ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯಲ್ಲಿ ಇರುವಾಗಲೇ ಕೈಗೆ ಹಾಕಲಾಗಿದ್ದ ಗ್ಲೂಕೋಸ್ ಕಿತ್ತೊಗೆದು ಗದ್ದೆಗೆ ಜಿಗಿದಿದ್ದಾನೆ. ತನ್ನ ಪ್ರೇಯಸಿ ಮನೆಗೆ ಬಂದಿದ್ದು ಭೇಟಿ ಆಗಬೇಕು ಎಂದು ಗೋಗರೆದಿದ್ದಾನೆ. ಭತ್ತದ ಗದ್ದೆಗೆ ಜಿಗಿದಿದ್ದರಿಂದ ಆತನ ಮೈ ಎಲ್ಲ ಕೆಸರಾಗಿತ್ತು. ನಂತರ, ಆಸ್ಪತ್ರೆ ಸಿಬ್ಬಂದಿ ಆತನನ್ನು ಹಿಂಬಾಲಿಸಿ ಮನವೊಲೈಸಿ ಕರೆದುಕೊಂಡು ಬಂದಿದ್ದಾರೆ. ಬಳಿಕ ನೀರಿನಿಂದ ಕೆಸರು ತೊಳೆದು ಆಟೋದಲ್ಲಿ ಕೂಡಿಸಿಕೊಂಡು ಬಂದಿದ್ದಾರೆ.
ಆಸ್ಪತ್ರೆ ಹತ್ತಿರ ಬಂದು ಆಟೋದಿಂದ ಕೆಳಗೆ ಇಳಿಯುವುದಿಲ್ಲ ಎಂಬ ಕ್ಯಾತೆ ತೆಗೆದಿದ್ದಾನೆ. ಸೋಂಕಿತ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಇಲ್ಲದ ಕಾರಣದಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳೀಸಿದ್ದು, ಬೇರೆಯ ಕಡೆಗೆ ದಾಖಲಿಸುವಂತೆ ಆಸ್ಪತ್ರೆಯವರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

https://www.suddikanaja.com/2021/01/10/birds-flu-characteristics-and-treatment/

error: Content is protected !!