ಲಾಕ್ ಡೌನ್ ಮೊದಲ ದಿನ ಭಾರಿ ಸಂಖ್ಯೆಯಲ್ಲಿ ವಾಹನಗಳು ಸೀಜ್, ವಸೂಲಾದ ದಂಡವೆಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ಮೊದಲ ದಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಸೋಮವಾರವೊಂದೇ ದಿನ 585 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

READ | ಹೊರಗೆ ಬಂದರೆ ಬೈಕ್‌ ಸೀಜ್ ಪಕ್ಕಾ, ಎಲ್ಲ ಸರ್ಕಲ್ ಗಳು ಕ್ಲೋಸ್, ಖಾಕಿ ಸರ್ಪಗಾವಲಲ್ಲಿ ಹೇಗಿದೆ ಮೊದಲ ದಿನದ ಲಾಕ್ ಡೌನ್?

ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ ಮಾಡಿದ 500 ದ್ವಿ ಚಕ್ರ ವಾಹನ, 10 ಆಟೋ ಮತ್ತು 75 ಕಾರುಗಳನ್ನು ಸೀಜ್ ಮಾಡಲಾಗಿದೆ.
ವಾಹನ ಮಾಲೀಕರ ಮೇಲೆ ಐಎಂವಿ ಕಾಯ್ದೆ ಅಡಿಯಲ್ಲಿ ಒಟ್ಟು 212 ಪ್ರಕರಣಗಳನ್ನು ದಾಖಲಿಸಿ 1,00,900 ರೂಪಾಯಿ ದಂಡ ವಿಧಿಸಲಾಗಿದೆ.

 

error: Content is protected !!