ಮೇ 11ರಿಂದ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಕೆಗೆ ಅವಕಾಶ, ಷರತ್ತುಗಳೇನು ಗೊತ್ತಾ? ಮೊದಲ ದಿನವೇ ಮಾರ್ಗಸೂಚಿಯಲ್ಲಿ ಮತ್ತೊಂದು ಮಾರ್ಪಾಟು

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ರಾಜ್ಯದಾದ್ಯಂತ ಸೋಮವಾರದಿಂದ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ, ಅಗತ್ಯ ವಸ್ತುಗಳ ಖರೀದಿಗೆ ಕಾಲ್ನಡಿಗೆಯಲ್ಲೇ ಹೋಗಬೇಕು ಎಂಬ ನಿಯಮಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ಲಾಕ್ ಡೌನ್ ಎರಡನೇ ದಿನವಾದ ಮಂಗಳವಾರದಿಂದಲೇ ಅನ್ವಯವಾಗುವಂತೆ ಮಾರ್ಗಸೂಚಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ.

praveen sudಬೆಳಗ್ಗೆ 6 ರಿಂದ 10 ಗಂಟೆಯವರೆಗೆ ವಾಹನಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಈ ಬಗ್ಗೆ ತಮ್ಮ ಅಧೀಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಅವರು, ಕೆಲವೊಂದು ಷರತ್ತುಗಳನ್ನು ವಿಧಿಸಿ ವಾಹನ ಕೊಂಡೊಯ್ಯಲು ಸೂಚನೆ ನೀಡಿದ್ದಾರೆ.
ಕಂಡಿಷನ್ ಗಳೇನು?
ಬಡಾವಣೆ ವ್ಯಾಪ್ತಿಯಲ್ಲಿರುವ ಅಂಗಡಿಗಳಿಗೆ ತೆರಳಿ ಅಗತ್ಯವಸ್ತುಗಳನ್ನು ಖರೀದಿಸಲು ವಾಹನಗಳನ್ನು ಬಳಸಬಹುದು. ಅದನ್ನು ಬಿಟ್ಟು ಬೇರೆಯ ಬಡಾವಣೆಗಳಿಗೆ ಹೋಗುವಂತಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಇದೇ ನಿಯಮ ಅನ್ವಯವಾಗಲಿದೆ.

READ | ಮತ್ತಷ್ಟು ಕಠಿಣ ರೂಲ್ಸ್, ಮೇ 10 ರಿಂದ ಕರ್ನಾಟಕ ಲಾಕ್, ಏನಿರಲಿದೆ, ಏನಿರಲ್ಲ? ಯಾವೆಲ್ಲ ನಿಯಮಗಳು ಕಠಿಣ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಯಾವುದೇ ಕಾರಣಕ್ಕೂ ನೀಡಲಾಗಿರುವ ಈ ಅವಕಾಶದ ದುರುಪಯೋಗ ಮಾಡಬಾರದು. ವಾಹನದೊಂದಿಗೆ ಎಲ್ಲೆಂದರಲ್ಲಿ ಓಡಾಡುವಂತಿಲ್ಲ. ಸ್ವಯಂ ರಕ್ಷಣೆಗೆ ಮನೆಯಲ್ಲೇ ಇರುವಂತೆ ತಿಳಿಸಿದ್ದಾರೆ.

error: Content is protected !!