ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಭದ್ರಾವತಿಯ ಎರಡು ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
READ | ನಾಳೆಯಿಂದ 4 ಲಾಕ್ ಡೌನ್ ಹೇಗಿರಲಿದೆ? ಹಬ್ಬಗಳಿಗೇನು ನಿಯಮ?
ನಿಯಮ ವಿರೋಧಿಸಿದ್ದಕ್ಕೆ ಮಾಲೀಕರ ವಿರುದ್ಧ ದಿ ಕರ್ನಾಟಕ ಎಪಿಡೆಮಿಕ್ ಡಿಸೋಸ್ ಕಾಯ್ದೆ ಅಡಿಯಲ್ಲಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ.
1.62 ಲಕ್ಷ ರೂ. ದಂಡ | ನಿಯಮ ಉಲ್ಲಂಘನೆ ಮಾಡಿದ 409 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 376 ದ್ವಿ ಚಕ್ರ ವಾಹನ, 20 ಆಟೋ ಮತ್ತು 13 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಂವಿ ಕಾಯ್ದೆ ಅಡಿಯಲ್ಲಿ ಒಟ್ಟು 364 ಪ್ರಕರಣಗಳನ್ನು ದಾಖಲಿಸಿ 1,62,700 ರೂಪಾಯಿ ದಂಡ ವಿಧಿಸಲಾಗಿದೆ.