ಶುಗರ್, ಕಿಡ್ನಿ ಕಲ್ಲಿಗೆ ರಾಮ ಬಾಣ ಬಾಳೆ ದಿಂಡು, ಈ‌ ನವೋದ್ಯಮಕ್ಕೆ ಭರ್ಜರಿ‌ ರೆಸ್ಪಾನ್ಸ್, ರೆಡಿ ಟು ಕುಕ್ ಯಾರಿಗೆ ಸಂಪರ್ಕಿಸಬೇಕು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಹಲವು ಔಷಧೀಯ ಗುಣಗಳನ್ನು ಹೊಂದಿರುವ ಬಾಳೆ‌ ದಿಂಡು ಒತ್ತಡದ ಜೀವನದ ನಡುವೆ ಅಡುಗೆಯ ಮನೆಯಿಂದ ದೂರ ಸರಿಯುತ್ತಿದೆ.

https://www.suddikanaja.com/2021/03/05/fire-accident-in-sorab/

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವುದಲ್ಲದೇ ದೇಹ ತಂಪಾಗಿಡುವುದು, ಸಕ್ಕರೆ ಕಾಯಿಲೆ ಇರಿವವರಿಗಂತೂ ಹೇಳಿ ಮಾಡಿಸಿದ ಪದಾರ್ಥವಿದು. ಇಷ್ಟೊಂದು ವೈಶಿಷ್ಟ್ಯ ಹೊಂದಿರುವ ಬಾಳೆ‌ ದಿಂಡು ಆಗಾಗ್ಗೆ ಅಡುಗೆ ಪದಾರ್ಥವಾಗಿ ಸೇವನೆ ಮಾಡಬೇಕು.‌ ಆದರೆ, ಬಾಳೆ ದಿಂಡನ್ನು ಕತ್ತರಿಸಿ, ನಾರು ತೆಗೆದು ಅಡುಗೆ ಮಾಡಲು ಸ್ವಲ್ಪ ಕಷ್ಟ. ಇದನ್ನು ಮನಗಂಡು ಮಲೆನಾಡು ಮೂಲದ ನವೋದ್ಯಮವೊಂದನ್ನು ಆರಂಭಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿರುವ ನವೀನ್ ಅವರೇ ಈ‌ ಉದ್ಯಮ ಆರಂಭಿಸಿರುವ ಉದ್ಯಮಿ. ಎನ್.ಜಿ.ವಿ. ನಾಚುರಲ್ಸ್ ಹೆಸರಿನ ಸಂಸ್ಥೆ ಪ್ರಾರಭಿಸಿ ‘ರೆಡಿ ಟು ಕುಕ್ ‘ಬಾಳೆ ದಿಂಡನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಹೊರ ರಾಜ್ಯಗಳಿಂದ ಬಾಳೆ ದಿಂಡು ಆಮದು |ಅಡುಗೆಗೆ ಯೋಗ್ಯವಾದ ಬಾಳೆ ಮರವನ್ನು ಬೇರೆ ರಾಜ್ಯಗಳಿಂದ ತರಿಸಿ, ಸಂಪೂರ್ಣ ಯಂತ್ರ ಗಳ ಮೂಲಕ ಪಲ್ಯಾ, ಮೊಸರುಬಜ್ಜಿ ಮತ್ತು ಇತರೆ ಪದಾರ್ಥಗಳನ್ನೂ ಮಾಡಲು ಅನುಕೂಲ ಆಗುವಂತೆ ಕತ್ತರಿಸಿ, ನಾರನ್ನು ತೆಗೆದು ಆಹಾರ ಗುಣಮಟ್ಟದ ಪ್ಯಾಕೆಟ್ ಗಳಲ್ಲಿ ರಿಟೇಲ್ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದ್ದಾರೆ.
ಎಳೆ‌ ಹಲಸು (ಹಲಸಿನ‌ ಗುಜ್ಜೆ) | ರುಚಿಕರ ಹಾಗೂ ಅಡುಗೆಗೆ ತಯಾರುಗೊಳಿಸಲು ಕಷ್ಟಕರವಾದ ಹಲಸಿನ ಗುಜ್ಜೆಯನ್ನು ರೆಡಿ ಟು ಕುಕ್ ಆಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.
“ಆರೋಗ್ಯ ಜೀವನಕ್ಕೆ ನೈಸರ್ಗಿಕ ಆಹಾರ” ಘೋಷ ವಾಕ್ಯದೊಂದಿಗೆ ರೈತರ ಆದಾಯವನ್ನು ದ್ವಿಗುಣ ಗೊಳಿಸುವ ಉದ್ದೇಶದಿಂದ ಆರಂಭಿಸಿರುವ ಉದ್ಯಮ ಈಗಾಗಲೇ ಬೆಂಗಳೂರು, ಮಂಗಳೂರು ಮತ್ತು ಚೆನ್ನೈ ನಗರದ ಹಲವಾರು ಹೋಟೆಲ್ ಹಾಗೂ ಕಾಲೇಜು ಹಾಸ್ಟೆಲ್ ಗಳಲ್ಲಿ ದಿನ ನಿತ್ಯದ ಅಡುಗೆ ರೂಪದಲ್ಲಿ‌ ಬಳಸಲಾಗುತ್ತಿದೆ. ಬಳಸುತ್ತಿದ್ದಾರೆ.
ಮಾಹಿತಿ ಬೇಕಿದ್ದರೆ 9945577599 ಸಂಪರ್ಕಿಸಿ.
ಬಾಳೆ‌‌ ದಿಂಡಿನ ಪ್ರಯೋಜನಗಳೇನು‌ | ಬಾಳೆದಿಂಡು ಮೂತ್ರ ಕೋಶದ ಕಲ್ಲು ನಿವಾರಣೆ, ಸಕ್ಕರೆ ಕಾಯಿಲೆ, ದೇಹದ ತೂಕ ಇಳಿಸಲು, ಮಲಬದ್ಧತೆ ನಿವಾರಣೆ, ಆ್ಯಸಿಡಿಟಿ, ಮೂತ್ರನಾಳದ ಸೋಂಕು‌ ನಿವಾರಣೆ, ಜೀರ್ಣಾಂಗಕ್ಕೆ ಪೂರಕ.

https://www.suddikanaja.com/2021/03/14/action-to-revive-visl-factory-mp-by-raghavendra-said/

error: Content is protected !!