ಮಧುಮೇಹಿಗಳೇ ಬ್ಲ್ಯಾಕ್ ಫಂಗಸ್‍ನಿಂದ ಎಚ್ಚರ, ಏನು ಲಕ್ಷಣ, ಪರಿಹಾರ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಂದೆಡೆ ಕೊರೊನಾ ಆರ್ಭಟ, ಮತ್ತೊಂದೆಡೆ ಬ್ಲ್ಯಾಕ್ ಫಂಗಸ್ ಸಂಕಟ ಎದುರಾಗಿದೆ. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ‘ಬ್ಲ್ಯಾಕ್ ಫಂಗಸ್’ (ಮುಕರ್ ಮೈಕೊಸಿಸ್) ಎರಡನೇ ಅಲೆಯಲ್ಲಿ ಸೋಂಕಿನ ಚಿಕಿತ್ಸೆ ಪಡೆದು ಗುಣಮುಖರಾದ ಸಕ್ಕರೆ ಕಾಯಿಲೆ ಇರುವವರಲ್ಲಿ ಕಾಣಿಸಿಕೊಳ್ಳುತ್ತಿರುವುದು ಭೀತಿಗೆ ಕಾರಣವಾಗಿದೆ.

READ | ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು

ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬ್ಲ್ಯಾಕ್ ಫಂಗಸ್ ಗೆ ಜನರು ಬಲಿಯಾಗುತ್ತಿದ್ದಾರೆ. ತಜ್ಞರು ಹೇಳುವಂತೆ, ಬ್ಲ್ಯಾಕ್ ಫಂಗಸ್ ನಿಂದ ತಪ್ಪಿಸಿಕೊಳ್ಳಬೇಕಾದರೆ ಅಲರ್ಜಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಇಲ್ಲದಿದ್ದರೆ ಸುಲಭವಾಗಿ ಕಪ್ಪು ಶಿಲೀಂದ್ರಕ್ಕೆ ಬಲಿಯಾಗುವ ಸಾಧ್ಯತೆ ಇದೆ.

ಈ ಮುಂಚೆ ದೆಹಲಿಗೆ ಸೀಮಿತವಾಗಿದ್ದ ಕಾಯಿಲೆ ಈಗ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಹರಿಯಾಣ ಸೇರಿದಂತೆ ಹಲವೆಡೆ ಹರಡುತ್ತಿದೆ.
ಈ ಶಿಲೀಂದ್ರವೇನೋ ಹೊಸತಲ್ಲ. 2003ರಲ್ಲಿಯೇ ಅಲ್ಲೊಮ್ಮೆ ಇಲ್ಲೊಮ್ಮೆ ಉಲ್ಬಣಗೊಂಡು ಜನರನ್ನು ಕಾಡುತಿತ್ತು. ಮುಖ್ಯವಾಗಿ ಇದು ಮಣ್ಣು ಮತ್ತಿತರ ಪದಾರ್ಥಗಳಲ್ಲಿ ಆಶ್ರಯ ಪಡೆದಿರುತ್ತದೆ. ಈಗ ಕೊರೊನಾ ಎರಡನೇ ಅಲೆಯಲ್ಲಿ ಎಲ್ಲಿಲ್ಲದಂತೆ ಕಾಡುತ್ತಿದೆ.
ಇಮ್ಯೂನಿಟಿ ಕೊರತೆ, ಶಿಲೀಂದ್ರ ಅಟ್ಯಾಕ್ | ಸಕ್ಕರೆ ಕಾಯಿಲೆ ಇರುವವರು ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದು ಹೊರಗೆ ಬರುವ ಹೊತ್ತಿಗೆ ಅರ್ಧ ಬಳಲಿರುತ್ತಾರೆ. ಅದರಲ್ಲೂ ಚಿಕಿತ್ಸೆ ವೇಳೆ ಅತಿಯಾದ ಸ್ಟೆರಾಯ್ಡ್ ಬಳಸಿದ್ದಲ್ಲಿ ಆತಂಕ ಇನ್ನಷ್ಟು ಹೆಚ್ಚಿರುತ್ತದೆ. ಸುಲಭವಾಗಿ ಅಂತಹವರ ಮೇಲೆ ಬ್ಲ್ಯಾಕ್ ಫಂಗಸ್ ಆಕ್ರಮಣ ಮಾಡುತ್ತದೆ.

READ | ಟೀಂ ಇಂಡಿಯಾದ ನ್ಯೂ ಫ್ಯಾಬ್-4, ಕೆಳ ಕ್ರಮಾಂಕದ ಹುಡುಗರ ಆಟಕ್ಕೆ ಬೆಸ್ತು ಬಿದ್ದ ಎದುರಾಳಿಗಳು, ಇದು ಹೊಸ ತಲೆಮಾರಿನ ಕ್ರಿಕೆಟ್

ಇಮ್ಯೂನಿಟಿ ಕಡಿಮೆ ಆಗಿರುವುದರಿಂದ ಗಾಳಿಯಲ್ಲಿರುವ ಈ ಶಿಲೀಂದ್ರವೂ ಮೂಗಿನ ಮೂಲಕ ಪ್ರವೇಶಿಸಿ, ಭಾರಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ.
ಮೂಗಿನ ಮೂಲಕ ದೇಹಕ್ಕೆ ಪ್ರವೇಶ ಪಡೆದ ಫಂಗಸ್ ಸೈನಸ್ ನಿಂದ ಕಣ್ಣು ಅಲ್ಲಿಂದ ಮಿದುಳಿಗೆ ತಲುಪುತ್ತದೆ. ಹೀಗಾಗಿ, ಜಾಗರೂಕತೆ ವಹಿಸಬೇಕು.
ಯಾರಿಗೆ ಅಪಾಯ | ಮಧುಮೇಹಿಗಳು, ನವಜಾತ ಶಿಶು ಮತ್ತು ಮಕ್ಕಳು, ವೃದ್ಧರು, ಅಸ್ತಮಾ ಮತ್ತು ಅಲರ್ಜಿ ಇರುವವರು, ಕಡಿಮೆ ರೋಗ ನಿರೋಧಕ ಶಕ್ತಿ.
ರೋಗದ ಲಕ್ಷಣಗಳು | ಜ್ವರ, ತಲೆನೋವು, ಕಣ್ಣು, ಮೂಗಿನ ಸುತ್ತ ಕೆಂಪಾಗುವುದು, ಒಣ ಕೆಮ್ಮು, ಗ್ಯಾಸ್ಟ್ರಿಕ್, ರಕ್ತ ವಾಂತಿ, ಮೂಗಿನಿಂದ ಕಪ್ಪು ಲೋಳೆ ಹೊರ ಸೂಸುವಿಕೆ, ಚರ್ಮದ ಅಲರ್ಜಿ, ಶೀತ, ಗಂಟಲು ಕೆರೆತ, ಉಬ್ಬಸ, ಶಿಲೀಂದ್ರ ಸೋಂಕು ಹಬ್ಬಿದರೆ ಮುಖದಲ್ಲಿ ಕೆಲವೊಂದು ಬದಲಾವಣೆಗಳು ಸಂಭವಿಸುತ್ತವೆ ಇತ್ಯಾದಿ

ಪರಿಹಾರ

  1. ಕೊರೊನಾ ಸೋಂಕು ತಗುಲಿದ ಮಧುಮೇಹಿಗಳು, ವೀಪರಿತ ಸ್ಟೇರಾಯ್ಡ್ ಪಡೆದವರು ಕೆಲವು ದಿನ ಹೋಮ್ ಐಸೋಲೇಷನ್ ನಲ್ಲಿರುವುದು ಉತ್ತಮ
    ಧೂಳು ಶ್ವಾಸಕೋಶಕ್ಕೆ ಸೇರದಂತೆ ಮುನ್ನೆಚ್ಚರಿಕೆ ಅತ್ಯಗತ್ಯ. ಇದಕ್ಕಾಗಿ ಮಾಸ್ಕ್ ಧರಿಸಬಹುದು
  2. ಸಕ್ಕರೆ ಕಾಯಿಲೆ ಇರುವವರು ಕೊರೊನಾ ಸೋಂಕು ತಗಲಿದ್ದಲ್ಲಿ ಚಿಕಿತ್ಸೆ ವೇಳೆ ಸಾಧ್ಯವಾದಷ್ಟು ಕಡಿಮೆ ಸ್ಟೆರಾಯ್ಡ್ ಬಳಸುವುದು ಉತ್ತಮ
  3. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು
  4. ರೋಗದ ಲಕ್ಷಣಗಳಿದ್ದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು

https://www.suddikanaja.com/2021/05/02/two-case-in-vinobanagara-police-station-for-illegal-supply-of-oxygen/

error: Content is protected !!