ಶಿವಮೊಗ್ಗದಲ್ಲಿ ಕೊರೊನಾದಿಂದ ಸಾಯುವವರ ಲೆಕ್ಕದಲ್ಲಿ ಎಡವಟ್ಟು, ಆಡಳಿತರೂಢ ಪಕ್ಷದ ಶಾಸಕರ‌ ಗಂಭೀರ ಆರೋಪ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾದಿಂದ ಮೃತ ಪಡುವವರ ಲೆಕ್ಕಾಚಾರದಲ್ಲಿ ಎಡವಟ್ಟು ಆಗುತ್ತಿದೆ.‌
ಸಾವಿನ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಗಂಭೀರವಾಗಿ ಆರೋಪಿಸಿದರು.

READ | ಅಕ್ಟೋಬರ್ ನಲ್ಲಿ‌ ಬರಲಿರುವ ಕೊರೊನಾ 3ನೇ ಅಲೆ ಮಕ್ಕಳಿಗೆ ಮಾರಕ, ಇದಕ್ಕಾಗಿ ಈಗಿನಿಂದಲೇ ಸಿದ್ಧತೆ, ತಜ್ಞರ ಸಲಹೆಗಳೇನು ಗೊತ್ತಾ?

ನಗರದ ಜಿಲ್ಲಾಡಳಿತದ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಸಮನ್ವಯ ಕೊರತೆ ಇರುವುದು ಕಂಡುಬಂದಿದೆ. ಇದನ್ನು ಸರಿಪಡಿಸಬೇಕು ಎಂದು ಹೇಳಿದರು.
ಆರ್.ಟಿ.ಪಿ.ಸಿ.ಆರ್ ಪಾಸಿಟಿವ್ ವ್ಯಕ್ತಿಗಳನ್ನು ಮಾತ್ರ ಸೋಂಕಿತ ವ್ಯಕ್ತಿ ಎಂದು ಪರಿಗಣಿಸಲಾಗುತ್ತಿದೆ. ಸಿಟಿ ಸ್ಕ್ಯಾನ್ ಮೂಲಕ ಕೊರೊನಾ ಸೋಂಕು ಪತ್ತೆಯಾದತೆ ಅದನ್ನು ಪಾಸಿಟಿವ್ ಎಂದು ಪರಿಗಣಿಸಲಾಗುತ್ತಿಲ್ಲ‌. ಇದರಿಂದ ಮೃತರ ಆಡಿಟ್ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಆಪಾದಿಸಿದರು.

error: Content is protected !!