ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಮರಣ ಮೃದಂಗ ಮತ್ತೆ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ 16 ರ ಆಸುಪಾಸಿನಲ್ಲಿದ್ದ ಸಾವಿನ ಸಂಖ್ಯೆ ಬುಧವಾರ ಮತ್ತೆ ಏರಿಕೆ ಕಂಡಿದೆ. ಇಂದು 19 ಜನರನ್ನು ಕೊರೊನಾ ಬಲಿ ಪಡೆದಿದೆ.
https://www.suddikanaja.com/2021/05/16/covid-treatment-unit-starts/
810 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 29 ವಿದ್ಯಾರ್ಥಿಗಳು ಮತ್ತು 6 ಸಿಬ್ಬಂದಿ ಇದ್ದಾರೆ. 884 ಜನ ಗುಣಮುಖರಾಗಿದ್ದಾರೆ.
2,206 ಜನರ ಗಂಟಲು ದ್ರವ ಪಡೆದಿದ್ದು, 1,230 ನೆಗೆಟಿವ್ ಬಂದಿವೆ.
ಸಕ್ರಿಯ ಪ್ರಕರಣ | ಮೆಗ್ಗಾನ್ ನಲ್ಲಿ 610, ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 232, ಕೋವಿಡ್ ಕೇರ್ ಸೆಂಟರ್‌ನಲ್ಲಿ 518, ಖಾಸಗಿ ಆಸ್ಪತ್ರೆಯಲ್ಲಿ 637, ಹೋಮ್ ಐಸೋಲೇಷನ್ ನಲ್ಲಿ 4,136, ಟ್ರಿಯೇಜ್ ನಲ್ಲಿ 749 ಜನ ಸೋಂಕಿತರಿದ್ದಾರೆ. ಒಟ್ಟು 6,882 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.
ತಾಲೂಕುವಾರು ವರದಿ | ಶಿವಮೊಗ್ಗ 216, ಭದ್ರಾವತಿ 133, ತೀರ್ಥಹಳ್ಳಿ 62, ಶಿಕಾರಿಪುರ 94, ಸಾಗರ 140, ಹೊಸನಗರ 19, ಸೊರಬ 128, ಬಾಹ್ಯ ಜಿಲ್ಲೆಯ 18 ಪ್ರಕರಣಗಳಿವೆ.
https://www.suddikanaja.com/2021/05/16/covid-treatment-unit-starts/