ಗಾಂಧಿ ಬಜಾರ್ ಪ್ರದೇಶದಲ್ಲಿ ಮನೆ ಮುಂದೆ ನಿಲ್ಲಿಸಿದ ಕಾರಿನ ಗಾಜು ಪುಡಿ ಪುಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ ಕಾರು, ಬೈಕ್, ಆಟೋಗಳ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ.

https://www.suddikanaja.com/2021/05/08/eviction-of-hotel-and-buildings-in-sigandur/

ಎಂಕೆಕೆ ರಸ್ತೆ, ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್ ರಸ್ತೆ ಹೀಗೆ ಸುತ್ತ‌ಮುತ್ತಲಿನ ಪ್ರದೇಶದಲ್ಲಿ ವಾಹನಗಳನ್ನು ಜಖಂಗೊಳಿಸಲಾಗಿದೆ. ಇದರಲ್ಲಿ ಒಂದು ಸರ್ಕಾರಿ ಲೇಬಲ್ ಇರುವ ವಾಹನವೂ ಇದೆ. ಲಭ್ಯ ಮಾಹಿತಿ ಪ್ರಕಾರ, 12ಕ್ಕೂ ಅಧಿಕ ಕಾರು, ಒಂದು ಬೈಕ್, ಆಟೋ ಕೂಡ ದುಷ್ಕರ್ಮಿಗಳ‌ ಅಟ್ಟಹಾಸಕ್ಕೆ ನಲುಗಿವೆ.

ಬುಧವಾರ ತಡ ರಾತ್ರಿ ಘಟನೆ ನಡೆದಿರುವುದಾಗಿ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಎಸ್ಪಿ ಲಕ್ಷ್ಮೀಕಾಂತ್, ಹೆಚ್ಚುವರಿ ಎಸ್ಪಿ ಎಚ್.ಟಿ.ಶೇಖರ್, ದೊಡ್ಡಪೇಟೆ ಠಾಣೆಯ ಇನ್ ಸ್ಪೆಕ್ಟರ್ ಹರೀಶ್ ಪಟೇಲ್ ಭೇಟಿ ನೀಡಿದ್ದಾರೆ.

ಕಠಿಣ ಕ್ರಮಕ್ಕೆ ಸೂಚನೆ | ಕಾರುಗಳ ಗಾಜನ್ನು ಪುಡಿ ಪುಡಿ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಸೂಚನೆ ನೀಡಿದ್ದಾರೆ.

https://www.suddikanaja.com/2020/12/03/communal-clash-in-shivamogga-gandhi-bazar/

error: Content is protected !!