ಕೌಶಲ ತರಬೇತಿಗೆ‌‌ ಇಲ್ಲಿದೆ‌ ಅವಕಾಶ, ಯಾವ ಕೋರ್ಸ್ ಲಭ್ಯ ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ ಅಡಿಯಲ್ಲಿ ಜಿಲ್ಲಾ ಕೌಶಲ ಮಿಷನ್ ವತಿಯಿಂದ ಹೆಲ್ತ್ ಕೇರ್ ಗೆ ಸಂಬಂಧಪಟ್ಟಂತೆ ಕೌಶಲ ತರಬೇತಿಯನ್ನು ನೀಡಲು ಆಸಕ್ತ ಯುವತಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

READ | ಅದ್ಧೂರಿ ಮದುವೆಗೆ ಬ್ರೇಕ್, ಅಧಿಕಾರಿಗಳ ಸಮ್ಮುಖದಲ್ಲಿ ನಡೀತು ಸರಳ ವಿವಾಹ

ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಹಾಗೂ ಪಿಯುಸಿ ಸೈನ್ಸ್ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‍ಎಸ್‍ಎಲ್‍ಸಿ ಶೈಕ್ಷಣಿಕ ಹಿನ್ನೆಲೆಯವರು ಜಿಡಿಎ ಅಡ್ವಾನ್ಸ್ಡ್ (ಕ್ರಿಟಿಕಲ್ ಕೇರ್) , ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ), ಹೋಂ ಹೆಲ್ತ್ ಐಡ್ಸ್, ಮೆಡಿಕಲ್ ಇಕ್ಯೂಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ವಿಭಾಗದಲ್ಲಿ ತರಬೇತಿ ನೀಡಲಾಗುವುದು. ಪಿಯುಸಿ ಅಭ್ಯರ್ಥಿಗಳಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್, ಪ್ಲೆಬೊಟೋನಿಸ್ಟ್ ಮತ್ತು ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ ತರಬೇತಿ ನೀಡಲಾಗುವುದು.
ಆಸಕ್ತ ಅರ್ಹ ಅಭ್ಯರ್ಥಿಗಳು ಮೇ 28ರ ಒಳಗಾಗಿ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿಯ ಗಿರೀಶ್ 9538191000, ಹಾಲೇಶ್ 7019410542, ದೇವೇಂದ್ರ ನಾಯ್ಕ 8762424173 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಬಹುದು.

error: Content is protected !!