ಶಿವಮೊಗ್ಗ, ಭದ್ರಾವತಿಯಲ್ಲಿ ಇನ್ನೂ ನಿಯಂತ್ರಣಕ್ಕೆ ಸಿಗುತ್ತಿಲ್ಲ‌ ಕೊರೊನಾ, ಇನ್ನುಳಿದೆಡೆ ಎಷ್ಟಿವೆ ಕೇಸ್? ಮುಂದುವರಿದ ಸಾವಿನ ಆರ್ಭಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾದಿಂದ ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಮಂಗಳವಾರ 19 ಜನ ಮೃತಪಟ್ಟಿದ್ದಾರೆ.

READ | ಕೊರೊನಾ ಅಟ್ಟಹಾಸ, ಒಂದೇ ದಿನ ತಾಯಿ, ಮಗ ಸಾವು, ಮನೆಯಲ್ಲಿ ಸೂತಕದ ಛಾಯೆ

ಶಿವಮೊಗ್ಗ, ಭದ್ರಾವತಿಯಲ್ಲಿ ಸೋಂಕಿನ ಸಂಖ್ಯೆ ಕೂಡ ಏರಿಕೆಯಾಗಿದೆ. ಇನ್ನುಳಿದ ತಾಲೂಕುಗಳಲ್ಲಿ ಇಂದು ಸೋಂಕಿತರ ಸಂಖ್ಯೆ ಎರಡಂಕಿಯಲ್ಲಿದೆ.
640 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 23 ವಿದ್ಯಾರ್ಥಿಗಳು ಇದ್ದಾರೆ. 895 ಜನ ಗುಣಮುಖರಾಗಿದ್ದಾರೆ.
2,418 ಮಾದರಿಯನ್ನು ಪಡೆದಿದ್ದು, 1,539 ನೆಗೆಟಿವ್ ಬಂದಿವೆ.
ಮೆಗ್ಗಾನ್ ನಲ್ಲಿ 620 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 246, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1255, ಖಾಸಗಿ ಆಸ್ಪತ್ರೆಯಲ್ಲಿ 978, ಹೋಮ್ ಐಸೋಲೇಷನ್‌ ನಲ್ಲಿ 3,028, ಟ್ರಿಯೇಜ್‌ ನಲ್ಲಿ 642 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 246, ಭದ್ರಾವತಿ 135, ತೀರ್ಥಹಳ್ಳಿ 35, ಶಿಕಾರಿಪುರ 36, ಸಾಗರ 59, ಹೊಸನಗರ 28, ಸೊರಬ 49, ಬಾಹ್ಯ ಜಿಲ್ಲೆಯ 34 ಪ್ರಕರಣಗಳಿವೆ.

https://www.suddikanaja.com/2021/05/15/covid-positive-case-raise-in-shivamogga/

error: Content is protected !!