ಕೊರೊನಾದಲ್ಲಿ ಪಾಸಾದ ಕೈದಿ ಹಾರ್ಟ್ ಅಟ್ಯಾಕ್ ನಲ್ಲಿ ಫೇಲ್, ಭ್ರಷ್ಟಾಚಾರ ಕೇಸ್ ನಲ್ಲಿ ಜೈಲು ಸೇರಿದ ಅಧಿಕಾರಿ ಸಾವು

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಕೊರೊನಾದಲ್ಲಿ ಪಾಸ್ ಆದರೂ ಇಲ್ಲೊಬ್ಬ ಸಜಾ ಬಂಧಿ ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿದ್ದಾರೆ.

READ | ಸಿಎಂ ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಷ್ ಎನ್ನಲು ಕಾರಣವೇನು? ಆರ್.ಡಿ.ಪಿ.ಆರ್. ಅಧಿಕಾರಿ, ಸಿಬ್ಬಂದಿಯೂ ಇನ್ಮುಂದೆ ಕೊರೊನಾ ವಾರಿಯರ್ಸ್

ಟ್ಯಾಂಕ್ ಮೊಹಲ್ಲಾ ನಿವಾಸಿ ಇಸ್ಮಾಯಿಲ್ ಖಾನ್ (72) ಎಂಬುವವರೇ ಮೃತಪಟ್ಟಿರುವ ಸಜಾ ಬಂಧಿ. ನಿವೃತ್ತ ಜಿಲ್ಲಾ ಖಜಾನೆ ಅಧಿಕಾರಿಯಾಗಿರುವ ಇವರು ಲಂಚ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು. ಇವರಿಗೆ ನ್ಯಾಯಾಲಯ ಒಂದು ವರ್ಷ ಜೈಲು, ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು.

READ | ಕೋವಿಡ್‍ನಿಂದ ಮೃತಪಟ್ಟವರ ಡೆಡ್‍ಬಾಡಿ ನೀಡಲು ನಿರಾಕರಿಸಿದ್ದಲ್ಲಿ ಆಸ್ಪತ್ರೆ ನೋಂದಣಿ ರದ್ದು

ಕಳೆದ 50 ದಿನಗಳ ಹಿಂದೆ ಜೈಲಿಗೆ ಬಂದಿದ್ದ ಇವರು ಒಂದಿಲ್ಲೊಂದು ಆರೋಗ್ಯದ ಸಮಸ್ಯೆಯಿಂದ ಬಳಲುತಿದ್ದರು. ಕೊರೊನಾ ಸೋಂಕಿನೊಂದಿಗೆ ಜೈಲು ಪ್ರವೇಶಿಸಿದ್ದರು. ಚಿಕಿತ್ಸೆ ಪಡೆದು ವಾಪಸ್ ಜೈಲಿಗೆ ಕರೆದುಕೊಂಡು ಬರಲಾಗಿತ್ತು.
ಏಪ್ರಿಲ್ 24ರಂದು ಎದೆ ನೋವು ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲ ನೀಡದೇ ಇವರು ಬುಧವಾರ ಮೃತಪಟ್ಟಿದ್ದಾರೆ.

https://www.suddikanaja.com/2020/11/21/fetal-detection-scanning-center-shivamogga/

error: Content is protected !!