TALENT | ತಮಿಳಿನಲ್ಲಿ ಕನ್ನಡತಿಯ ಹವಾ, ವೀಕೆಂಡ್‌ ಮಾಡೆಲಿಂಗ್ ಟು ಸಿನಿ ಜರ್ನಿ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ವಿದ್ಯಾಭ್ಯಾಸಕ್ಕಾಗಿ ಚೆನ್ನೈ ಸೇರಿದ ಈ ಯುವತಿ ಈಗ ತಮಿಳು ಭಾಷೆಯಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುವ ಮೂಲಕ ಧೂಳೆಬ್ಬಿಸಿದ್ದಾರೆ.

https://www.suddikanaja.com/2021/05/25/talent-hunt-show/

ಮೂಲತಃ ಕನ್ನಡದವರಾದ ಸುಮಾ ಪೂಜಾರಿಯೇ ಈ ಯುವ ನಟಿ. ಕರ್ನಾಟಕದಲ್ಲಿ ಓದು ಮುಗಿಸಿ ಚೆನ್ನೈನ ಇನ್ಫೋಸಿಸ್ ಕಂಪೆನಿಯಲ್ಲಿ ಉದ್ಯೋಗ ಆರಂಭಿಸಿದ ಇವರು ಮಾಡಲಿಂಗ್ ಗೆ ಕಾಲಿಟ್ಟು ಅಲ್ಲಿಯೂ ಸೈ ಎನಿಸಿಕೊಂಡರು.

ಉದ್ಯೋಗದೊಂದಿಗೆ ವೀಕೆಂಡ್ ಗಳಲ್ಲಿ ಮಾಡೆಲಿಂಗ್ ಮಾಡುತ್ತಿದ್ದರು. ಹೀಗೆ ಶುರುವಾದ ಬಣ್ಣದೊಂದಿಗಿನ ನಂಟು ಜಾಹೀರಾತು ಜಗತ್ತಿಗೆ ಕಾಲಿಡುವಂತೆ ಮಾಡಿತು. ಭಾರಿ ಮಹತ್ವಾಕಾಂಕ್ಷಿ ಆಗಿರುವ ಸುಮಾ ತಮಿಳು ಭಾಷೆ ಕಲಿತರು. ಬಳಿಕ ಚಿತ್ರಗಳಲ್ಲೂ ಚಾನ್ಸ್ ಗಿಟ್ಟಿಸಿಕೊಂಡರು.
‘ನೀರ್ಮೊಳಿ’ ಎಂಬ ಚಿತ್ರದಲ್ಲಿ ಅಭಿನಯಿಸಿದರು. ಇದಕ್ಕೆ ಇನ್ನೂ ಆ್ಯಕ್ಷನ್ ಕಟ್ ಹೇಳುತ್ತಿದ್ದಂತೆಯೇ ‘ಎನ್ನ ಸುಡುಂ ಪನಿ’ ಎಂಬ ಮತ್ತೊಂದು ಸಿನಿಮಾಕ್ಕೆ ಆಫರ್ ಒದಗಿ ಬಂತು. ತಮಿಳು ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ನಟಿಸಿದ್ದು, ಪೂಜಾ ಗಾಂಧಿ ನಟನೆಯ ‘ಮಿರರ್ ಆಫ್ ದಮಯಂತಿ’ ಚಿತ್ರದಲ್ಲೂ ತಮ್ಮ ನಟನೆಯ ಮೂಲಕ ವೀಕ್ಷಕರ ಮನಸು ಗೆದ್ದಿದ್ದಾರೆ.
ಬಹು ಭಾಷಾ ನಟಿ ಸುಮಾಗೆ ಸ್ಯಾಂಡಲ್ ವುಡ್ ನಲ್ಲೂ ನಟಿಸುವಾಸೆ | ದಕ್ಷಿಣ ಭಾರತದ ಕಾಲಿವುಡ್, ಟಾಲಿವುಡ್ ನಲ್ಲಿ ಅಭಿನಯಿಸಿರುವ ಸುಮಾಗೆ ಸ್ಯಾಂಡಲ್ ವುಡ್ ನಲ್ಲೂ ನಟಿಸುವ ಇಚ್ಛೆ ಇದೆ. ಈಗಾಗಲೇ ಅವರಿಗೆ ಎರಡು ಮೂರು ಕನ್ನಡ ಚಿತ್ರಗಳ ಅವಕಾಶಗಳು ಸಹ ಒದಗಿ ಬಂದಿದ್ದು ಒಂದೊಳ್ಳೆ ಸ್ಕ್ರಿಪ್ಟ್ ಗಾಗಿ ಕಾಯುತ್ತಿದ್ದಾರೆ.
ಸುಮಾ ಅವರಿಗೆ ಕುಟುಂಬದಲ್ಲೂ ಫುಲ್ ಸಪೋರ್ಟ್ ಇದ್ದು, ಮಾಡೆಲಿಂಗ್, ಸಿನಿಮಾ ಪಯಣ ಸಾಗಿದೆ. ಅಭಿಮಾನಿಗಳ ಮನಸಿನಲ್ಲಿ ಮನೆ ಮಾಡಿರುವ ಈ ಕನ್ನಡತಿ ಒಂದೊಳ್ಳೆ ಚಿತ್ರದೊಂದಿಗೆ ಸ್ಯಾಂಡಲ್ ವುಡ್ ಗೆ ಕಾಲಿಡಲಿ ಎಂಬುವುದು ಅಭಿಮಾನಿಗಳ ಒತ್ತಾಸೆಯಾಗಿದೆ‌.

https://www.suddikanaja.com/2021/01/26/koo-application-developed-by-indian-got-good-response-from-users/

error: Content is protected !!