ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರಕ್ಕಿಂತ ಶುಕ್ರವಾರ ಸೋಂಕಿನ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಶಿವಮೊಗ್ಗ, ಭದ್ರಾವತಿಯಲ್ಲಿ ಸೋಂಕು ಏರಿಕೆ ಕಾಣುತ್ತಲೇ ಇದೆ.
ಇಂದು 692 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 31 ವಿದ್ಯಾರ್ಥಿಗಳು, 4 ಸಿಬ್ಬಂದಿ ಇದ್ದಾರೆ. 652 ಜನ ಗುಣಮುಖರಾಗಿದ್ದಾರೆ. 13 ಜನರನ್ನು ಕೊರೊನಾ ಬಲಿ ಪಡೆದಿದೆ.
2,371 ಮಾದರಿಯನ್ನು ಪಡೆದಿದ್ದು, 1,796 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 650 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್ಸಿಯಲ್ಲಿ 377, ಕೋವಿಡ್ ಕೇರ್ ಸೆಂಟರ್ನಲ್ಲಿ 1,402, ಖಾಸಗಿ ಆಸ್ಪತ್ರೆಯಲ್ಲಿ 1,342, ಹೋಮ್ ಐಸೋಲೇಷನ್ ನಲ್ಲಿ 2,821, ಟ್ರಿಯೇಜ್ ನಲ್ಲಿ 781 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 260, ಭದ್ರಾವತಿ 124, ತೀರ್ಥಹಳ್ಳಿ 51, ಶಿಕಾರಿಪುರ 78, ಸಾಗರ 53, ಹೊಸನಗರ 36, ಸೊರಬ 60, ಬಾಹ್ಯ ಜಿಲ್ಲೆಯ 30 ಪ್ರಕರಣಗಳಿವೆ.