ಜೀವದ ಹಂಗು ತೊರೆದು ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ಗೆ ಮೇಯರ್ ಸನ್ಮಾನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೇಂದ್ರ ಸರ್ಕಾರದ ಆಡಳಿತದ ಎರಡನೇ ಅವಧಿಯ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್‌ ಗೆ ಸನ್ಮಾನಿಸಲಾಯಿತು.

ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುನೀತಾ, ಕೊರೊನಾ ವಾರಿಯರ್ ಗಳಾದ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿ, ನಾವೆಲ್ಲ ಸಂಕಷ್ಟಗಳ ಜೊತೆಗೆ ಜೀವನ ಮಾಡುತ್ತಿದ್ದೇವೆ. ಕೊರೊನಾ ತಡೆಯಲು ಹಗಲಿರುಳು ಎನ್ನದೆ ಕೆಲಸ ಮಾಡುತ್ತಿದ್ದೇವೆ ಎಂದರು.

ಮಾಧ್ಯಮ ಪ್ರಮುಖ ಕೆ.ವಿ.ಅಣ್ಣಪ್ಪ. ವಾರ್ಡ ಅಧ್ಯಕ್ಷ ರಘುನಾಥ್, ಎಚ್.ಎನ್‌.ಮಂಜುನಾಥ್, ಶ್ರೀನಿವಾಸ್, ಎಂ.ಶಿವು, ಶ್ರೀನಿವಾಸ್ ಉಪಸ್ಥಿತರಿದ್ದರು.

error: Content is protected !!