ಲಾಕ್ ಡೌನ್ ಗೆ ಶಿವಮೊಗ್ಗ ಸ್ತಬ್ಧ, ಎಲ್ಲಿ‌ ಹೇಗಿದೆ ಸ್ಥಿತಿ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಸೋಮವಾರದಿಂದ ಜೂನ್ 7ರ ವರೆಗೆ ಕಠಿಣ ಲಾಕ್ ಡೌನ್ ಘೋಷಿಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

READ | ಲಾಕ್ ಡೌನ್ ವೇಳೆ ಅಂಗಡಿ ಬೀಗ ಒಡೆದು ಕಳ್ಳತನ, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಬೆಳಗ್ಗೆ 10 ಗಂಟೆಗೆ ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ರಸ್ತೆಯ ಮೇಲೆ ಸಾರ್ವಜನಿಕರ ಸಂಚಾರವೇ ಇರಲಿಲ್ಲ. ವಾಹನಗಳು ಅತ್ಯಂತ ವಿರಳವಾಗಿ ಓಡಾಡುತ್ತಿವೆ.
ಬೆಳಗ್ಗೆ 10 ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆ ವೇಳೆಯಲ್ಲಿ ಜನರು ರಸ್ತೆಗಿಳಿದಿದ್ದರು. 9.40ರಿಂದ ಪೊಲೀಸರು ಧ್ವನಿವರ್ಧಕದ ಮೂಲಕ ಬಂದ್ ಮಾಡುವಂತೆ ಸೂಚನೆ ನೀಡಿದರು. ಬಳಿಕ ಎಲ್ಲ ಅಂಗಡಿಗಳು‌ ಬಂದ್ ಆಗಿವೆ.

READ | ಲಾಕ್‍ಡೌನ್‍ನಿಂದ ಬದಲಾದ ಬ್ಯಾಂಕ್ ವೇಳೆ, ನಾಳೆಯಿಂದ ಅನ್ವಯ

ನಿಯಮದಂತೆ, ಔಷಧಿ ಅಂಗಡಿಗಳು, ಆಸ್ಪತ್ರೆ, ಮನೆಗಳಿಗೆ ಹಾಲು ಪೂರೈಕೆ ಮಾಡುವವರು ಹೀಗೆ ಹಲವರ ಸಂಚಾರಕ್ಕೆ ಯಾವುದೇ ವ್ಯತ್ತಯವಾಗಿಲ್ಲ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರು ಗಸ್ತಿನಲ್ಲಿದ್ದಾರೆ.

error: Content is protected !!