ಇದುವರೆಗೆ ಕೊರೊನಾಕ್ಕೆ ಜಿಲ್ಲೆಯಲ್ಲಿ 807 ಜನ ಬಲಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೊದಲನೇ ಅಲೆ ಹಾಗೂ ಎರಡನೇ ಅಲೆ ಸೇರಿ ಜಿಲ್ಲೆಯಲ್ಲಿ ಒಟ್ಟು 807 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ.

READ | ಲಸಿಕೆ ಪಡೆಯಲು ಬೆಳಗ್ಗೆ 6ರಿಂದಲೇ ಕ್ಯೂ, ಶುಗರ್, ಬಿಪಿ ಇರೋರಿಗೆ ಸಂಕಷ್ಟ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಸೋಮವಾರ 13 ಜನ ಮೃತಪಟ್ಟಿದ್ದಾರೆ. ಇಂದು ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಮತ್ತೆ ಇಳಿಕೆಯಾಗಿದೆ. 558 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 26 ವಿದ್ಯಾರ್ಥಿಗಳು, 7 ಸಿಬ್ಬಂದಿ ಇದ್ದಾರೆ. 809 ಜನ ಗುಣಮುಖರಾಗಿದ್ದಾರೆ.

https://www.suddikanaja.com/2021/05/30/covid-second-wave-hit-shivamogga/

2,774 ಮಾದರಿಯನ್ನು ಪಡೆದಿದ್ದು, 1,273 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 620 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 326, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,434, ಖಾಸಗಿ ಆಸ್ಪತ್ರೆಯಲ್ಲಿ 1,477, ಹೋಮ್ ಐಸೋಲೇಷನ್‌ ನಲ್ಲಿ 2,345, ಟ್ರಿಯೇಜ್‌ ನಲ್ಲಿ 777 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,979 ಇದೆ.

ತಾಲೂಕುವಾರು ವರದಿ | ಶಿವಮೊಗ್ಗ 205, ಭದ್ರಾವತಿ 89, ತೀರ್ಥಹಳ್ಳಿ 21, ಶಿಕಾರಿಪುರ 71, ಸಾಗರ 55, ಹೊಸನಗರ 39, ಸೊರಬ 64, ಬಾಹ್ಯ ಜಿಲ್ಲೆಯ 14 ಪ್ರಕರಣಗಳಿವೆ.

https://www.suddikanaja.com/2021/05/17/covid-3rd-wave/

error: Content is protected !!