ಶಿವಮೊಗ್ಗ, ಭದ್ರಾವತಿಯಲ್ಲಿ ಮುಂದುವರಿದ ಕೊರೊನಾ ಆರ್ಭಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭದ್ರಾವತಿ, ಶಿವಮೊಗ್ಗದಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ.

READ | ವಾಕಿಂಗ್ ಬಂದರೆ ಹುಷಾರ್, ಪೊಲೀಸರೇ ಮಾಡಿಸಲಿದ್ದಾರೆ ಕೊರೊನಾ‌ ಟೆಸ್ಟ್, ಪಾಸಿಟಿವ್ ಬಂದರೆ ಕೊರೊನಾ ಸೆಂಟರ್ ಗೆ ಶಿಫ್ಟ್! 2 ಗಂಟೆ ಠಾಣೆಯಲ್ಲೇ ಕಳೆದ 84 ಜನ

ಮಂಗಳವಾರ ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾವಿದ್ದು, ಅದರಲ್ಲಿ ಮುಖ್ಯವಾಗಿ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪಾಸಿಟಿವ್ ಸಂಖ್ಯೆ ಏರಿಕೆ‌ ಕಂಡಿದೆ.
ಬುಧವಾರ 793 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪರೀಕ್ಷೆಯಿಂದ ಪತ್ತೆಯಾಗಿದೆ. ಅದರಲ್ಲಿ 32 ವಿದ್ಯಾರ್ಥಿಗಳು, 5 ಸಿಬ್ಬಂದಿ ಇದ್ದಾರೆ. 526 ಜನ ಗುಣಮುಖರಾಗಿದ್ದಾರೆ. 12 ಜನ ಮೃತಪಟ್ಟಿದ್ದಾರೆ.

https://www.suddikanaja.com/2021/05/26/corona-cases-increase-in-shivamogga/

3,366 ಮಾದರಿಯನ್ನು ಪಡೆದಿದ್ದು, 2,593 ನೆಗೆಟಿವ್ ಬಂದಿವೆ. ಮೆಗ್ಗಾನ್ ನಲ್ಲಿ 600 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 352, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,391, ಖಾಸಗಿ ಆಸ್ಪತ್ರೆಯಲ್ಲಿ 1,519, ಹೋಮ್ ಐಸೋಲೇಷನ್‌ ನಲ್ಲಿ 2,237, ಟ್ರಿಯೇಜ್‌ ನಲ್ಲಿ 762 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,861 ಇದೆ.
ತಾಲೂಕುವಾರು ವರದಿ | ಶಿವಮೊಗ್ಗ 285, ಭದ್ರಾವತಿ 150, ತೀರ್ಥಹಳ್ಳಿ 49, ಶಿಕಾರಿಪುರ 87, ಸಾಗರ 69, ಹೊಸನಗರ 76, ಸೊರಬ 51, ಬಾಹ್ಯ ಜಿಲ್ಲೆಯ 26 ಪ್ರಕರಣಗಳಿವೆ.

https://www.suddikanaja.com/2021/05/07/corona-death-increase-in-shivamogga/

error: Content is protected !!