ಭದ್ರಾವತಿ ಉಪ ವಿಭಾಗಕ್ಕೆ ಎಎಸ್‍ಪಿಯಾಗಿ ಐಪಿಎಸ್ ಅಧಿಕಾರಿ ನೇಮಕ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತೀರ್ಥಹಳ್ಳಿಗೆ ನೂತನ ಡಿವೈಎಸ್‍ಪಿ ನೇಮಕ ಬೆನ್ನಲ್ಲೇ ರಾಜ್ಯ ಸರ್ಕಾರ ಭದ್ರಾವತಿಗೆ ಐಪಿಎಸ್ ಅಧಿಕಾರಿಯನ್ನು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‍ಪಿ) ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2018ನೇ ಐಪಿಎಸ್ ಬ್ಯಾಚಿನ ಸಾಹಿಲ್ ಬಾಗ್ಲಾ ಅವರನ್ನು ಭದ್ರಾವತಿ ಉಪ ವಿಭಾಗಕ್ಕೆ ನಿಯೋಜಿಸಲಾಗಿದೆ. ಸಾಹಿಲ್ ಅವರು ಕೋಲಾರ ಉಪ ವಿಭಾಗದಲ್ಲಿ ಎಎಸ್‍ಪಿಯಾಗಿ ಕಾರ್ಯನಿರ್ವಹಿಸಿದ್ದು, ಭದ್ರಾವತಿಗೆ ವರ್ಗಾವಣೆ ಮಾಡಿ ಮಂಗಳವಾರ ಆದೇಶಿಸಲಾಗಿದೆ.

ಭದ್ರಾವತಿ ಉಪ ವಿಭಾಗಕ್ಕೆ ಇದು ಎರಡನೇ ಸಲ ಐಪಿಎಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸಾಗರದಲ್ಲೂ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.

error: Content is protected !!