ಶಿವಮೊಗ್ಗ ಕೋವಿಡ್ ವಾರ್ ರೂಂ ಆರಂಭ, ಯಾವ ವಾರ್ಡ್ ನವರು ಯಾರಿಗೆ ಕರೆ ಮಾಡಬೇಕು? ಇಲ್ಲಿದೆ ಮಾಹಿತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ ಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ‌ವಾರ್ ರೂಂ ಆರಂಭಿಸಲಾಗಿದೆ.

READ | ಜೂನ್‌ 5 ರಂದು ಹಲವೆಡೆ ಕರೆಂಟ್ ಇರಲ್ಲ

ಕೊರೊನಾ‌ ಸೋಂಕು ಹರಡುತ್ತಿರುವುದರಿಂದ ಪಾಲಿಕೆಯು ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಾರ್ವಜನಿಕರನ್ನು ಕೋವಿಡ್ 19 ರೋಗದಿಂದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಕೋವಿಡ್-19 ವಾರ್ ರೂಂ ಪ್ರಾರಂಭಿಸಿದೆ.

READ | ಮಳೆ ಹಿನ್ನೆಲೆ ಎಲ್ಲ ತಾಲೂಕುಗಳಲ್ಲಿ ಕಂಟ್ರೋಲ್ ರೂಂ, ನೆರೆ ಹಾವಳಿ ಗ್ರಾಮ ಗುರುತಿಸಲು ಸೂಚನೆ

ಈ ಸಂಖ್ಯೆಗೆ ಕರೆ‌ ಮಾಡಿ‌ | ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಾರ್ಡ್ ಸಂಖ್ಯೆ 1 ರಿಂದ 12 ರ ವರೆಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08182-226606, ವಾರ್ಡ್ ಸಂಖ್ಯೆ 13 ರಿಂದ 24 ದೂರವಾಣಿ ಸಂಖ್ಯೆ 08182-226607, ವಾರ್ಡ್ ಸಂಖ್ಯೆ 25 ರಿಂದ 35 ದೂರವಾಣಿ ಸಂಖ್ಯೆ 08182-226608 ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ತಿಳಿಸಿದ್ದಾರೆ.

error: Content is protected !!