ಪ್ರೀತಿಸುವಂತೆ ಟಾರ್ಚರ್ ನೀಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ

 

 

ಸುದ್ದಿ ಕಣಜ.ಕಾಂ
ಹೊಸನಗರ: ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಮಾನಸಿಕ ಕಿರುಕುಳ‌ ನೀಡಿದ್ದಾನೆಂಬ ಕಾರಣಕ್ಕೆ ಯುವತಿಯು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

READ | ಫೇಕ್ ಫೇಸ್ಬುಕ್ ಖಾತೆ ಸೃಷ್ಟಿಸಿ ಪತ್ನಿಯ ಫೋಟೊ ಬೇರೊಬ್ಬರಿಗೆ ಕಳುಹಿಸಿದ ಭೂಪ, ದಾಖಲಾಯ್ತು ಕೇಸ್

ತಾಲೂಕಿನ ನಗರ ಸಮೀಪದ ಕರಿಮನೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ನಿವಾಸಿ ಸಹನಾ (17) ಎಂಬಾಕೆಯು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

READ | ಕಾಲೇಜು ಬಂದ್ ಇದ್ದರೂ ವಿದ್ಯಾರ್ಥಿಗಳ ಬೆನ್ನು ಬಿಡದ ಕೊರೊನಾ ಸೋಂಕು, ಜಿಲ್ಲೆಯಲ್ಲಿ ಇಲ್ಲಿವರೆಗೆ ಸೋಂಕಿತ ವಿದ್ಯಾರ್ಥಿಗಳೆಷ್ಟು?

ನಗರ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ನೀಡಿದ್ದು, ಅದರನ್ವಯ, ಕನ್ನಳ್ಳಿ‌ಯ ಯುವಕ ಪ್ರೀತಿಸುವಂತೆ ಸಹನಾಗೆ ಕಿರುಕುಳ ನೀಡುತಿದ್ದ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ‌ ಮಾಡುತಿದ್ದಾರೆ.

error: Content is protected !!