ಶಿವಮೊಗ್ಗದಲ್ಲಿ ಇಂದು ಕೊರೊನಾ ರಿಲೀಫ್, ತಾಲೂಕುವಾರು ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ಗುರುವಾರ ಸ್ವಲ್ಪಮಟ್ಟಿಗೆ ತಗ್ಗಿದೆ. 447 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅದರಲ್ಲಿ 12 ವಿದ್ಯಾರ್ಥಿಗಳು, 3 ಕಾಲೇಜು ಸಿಬ್ಬಂದಿ ಇದ್ದಾರೆ. 624 ಜನ ಗುಣಮುಖರಾಗಿದ್ದಾರೆ. 8 ಸೋಂಕಿತರು ಮೃತಪಟ್ಟಿದ್ದಾರೆ.

ತಾಲೂಕುವಾರು ವರದಿ | ಶಿವಮೊಗ್ಗ 195, ಭದ್ರಾವತಿ 97, ತೀರ್ಥಹಳ್ಳಿ 29, ಶಿಕಾರಿಪುರ 45, ಸಾಗರ 24, ಹೊಸನಗರ 31, ಸೊರಬ 13 ಹಾಗೂ ಬಾಹ್ಯ ಜಿಲ್ಲೆಯ 13 ಪ್ರಕರಣಗಳು ಪತ್ತೆಯಾಗಿವೆ.
ಸಕ್ರಿಯ ಪ್ರಕರಣವೂ ಇಳಿಕೆ | ಮೆಗ್ಗಾನ್ ನಲ್ಲಿ 512, ಡಿಸಿಎಚ್‍ಸಿನಲ್ಲಿ 302, ಕೋವಿಡ್ ಕೇರ್ ಸೆಂಟರ್‍ನಲ್ಲಿ 1,698, ಖಾಸಗಿ ಆಸ್ಪತ್ರೆಯಲ್ಲಿ 1,144, ಹೋಮ್ ಐಸೋಲೇಷನ್‍ನಲ್ಲಿ 1,406 ಹಾಗೂ ಟ್ರಿಯೇಜ್‍ನಲ್ಲಿ 666 ಸೋಂಕಿತರಿದ್ದು, 5,728 ಸಕ್ರಿಯ ಪ್ರಕರಣಗಳಿವೆ. ಇಂದು 6,218 ಮಾದರಿಗಳನ್ನು ಸಂಗ್ರಹಿಸಿದ್ದು, 4,673 ವರದಿಗಳು ನೆಗೆಟಿವ್ ಬಂದಿವೆ.

error: Content is protected !!