ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾನುವಾರ ಇಳಿಕೆಯಾಗಿದೆ. 390 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದ್ದು, 705 ಜನ ಗುಣಮುಖರಾಗಿದ್ದಾರೆ.
ಪ್ರತಿ ದಿನ ಮೂವತ್ತರ ಮೇಲ್ಪಟ್ಟು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗುತಿತ್ತು. ಆದರೆ, ಇಂದು ಇಬ್ಬರಿಗೆ ಮಾತ್ರ ಸೋಂಕು ತಗುಲಿದ್ದು, ಒಬ್ಬರು ಕಾಲೇಜು ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. 5 ಜನ ಮೃತಪಟ್ಟಿದ್ದಾರೆ.
READ | ಸಗಟು ದಿನಸಿ ವ್ಯಾಪಾರಕ್ಕೆ ವಾರದಲ್ಲಿ 2 ದಿನ ಮಾತ್ರ ಅವಕಾಶ, ಅಡಿಕೆ ಮಂಡಿಯವರಿಗೆ ಪಾಸ್
ತಾಲೂಕುಗಳಲ್ಲಿ ತಗ್ಗಿದ ಆರ್ಭಟ | ಶಿವಮೊಗ್ಗ ತಾಲೂಕಿನಲ್ಲಿ 162 ಜನರಿಗೆ ಪಾಸಿಟಿವ್ ಬಂದಿದೆ. ಭದ್ರಾವತಿ 99, ತೀರ್ಥಹಳ್ಳಿ 22, ಶಿಕಾರಿಪುರ 31 ಸಾಗರ 31, ಹೊಸನಗರ 23, ಸೊರಬ 8 ಹಾಗೂ ಬಾಹ್ಯ ಜಿಲ್ಲೆಯ 14 ಜನರಲ್ಲಿ ಸೋಂಕು ಪತ್ತೆಯಾಗಿದೆ.