ಜೂನ್ 20ರಂದು ಶಿವಮೊಗ್ಗದ ಈ‌ ಪ್ರದೇಶದಲ್ಲಿ ಕರೆಂಟ್ ಇರಲ್ಲ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಆಲ್ಕೊಳ ವಿದ್ಯುತ್ ವಿತರಣೆ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್ 4, 5, 6, 7, 15 ಮತ್ತು 17ರಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 20ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | ಹೊಸನಗರದಲ್ಲಿ ದಾಖಲೆಯ ಮಳೆ, ಜೂನ್ ಎರಡನೇ ವಾರದಲ್ಲಿ ತೀವ್ರವಾಯ್ತು ವರ್ಷಧಾರೆ

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ | ಸಾಗರ ಮುಖ್ಯ ರಸ್ತೆ, ಎಪಿಎಂಸಿ ಮಾರ್ಕೆಟ್, ಭಾರ್ಗವಿ ಪೆಟ್ರೋಲ್ ಬಂಕ್, ಗುತ್ಯಪ್ಪ ಕಾಲೊನಿ, ಯುಟಿಪಿ ಕಾಲೊನಿ, ಸರ್ಕ್ಯೂಟ್ ಹೌಸ್, ರಂಗನಾಥ್ ಬಡಾವಣೆ, ವಿಜಯ ನಗರ, ಪಂಪ ನಗರ, ಸಾಗರ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಶಿವಾ ಟೈರ್ಸ್, ಸತ್ಯಂ ಫೋರ್‍ವಿಂಗ್ಸ್, ಪಟೇಲ್ ಸಾಮಿಲ್, ಎಲ್‍.ಐ.ಸಿ ಆಫೀಸ್, ತೆರೆಗೆ ಕಚೇರಿ, ಗೋಪಾಳ ಮುಖ್ಯರಸ್ತೆ, ಮೋರ್ ಅಕ್ಕಪಕ್ಕ, ಗೋಪಾಳ ಎ, ಬಿ, ಸಿ, ಡಿ, ಇ ಮತ್ತು ಎಫ್ ಬ್ಲಾಕ್, ಅಲ್‍ ಹರೀಮ್ ಲೇಔಟ್, 100 ಅಡಿ ರಸ್ತೆ ಪೆಟ್ರೋಲ್ ಬಂಕ್, ವಾಣಿಜ್ಯ ತೆರಿಗೆ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ನಗರ ಉಪ ವಿಭಾಗ 3ರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://www.suddikanaja.com/2021/01/17/ex-dcm-g-paramesh-urge-for-white-paper-from-karnataka-government/

error: Content is protected !!